News Kannada
Sunday, October 02 2022

ದೇಶ-ವಿದೇಶ

32 ವರ್ಷಗಳ ನಂತರ ಬುಡೆಲ್ಲಿ ದ್ವೀಪ ತೊರೆದ ಮೊರಾಂಡಿ - 1 min read

Photo Credit :

32 ವರ್ಷಗಳ ನಂತರ ಬುಡೆಲ್ಲಿ ದ್ವೀಪ ತೊರೆದ ಮೊರಾಂಡಿ

ಇಟಲಿ: ಬರೋಬ್ಬರಿ 32 ವರ್ಷಗಳ ಕಾಲ ದ್ವೀಪವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಇಟಲಿಯ ವೃದ್ಧನಿಗೆ ಅಧಿಕಾರಿಗಳು ಒತ್ತಡ ಹೇರಿದ ಕಾರಣ ಇದೀಗ ದ್ವೀಪದಿಂದ ಹೊರಟು ಹೋಗುತ್ತಿದ್ದಾರೆ.

81 ವರ್ಷದ ವೃದ್ಧ ಮೌರೋ ಮೊರಾಂಡಿ ಇಟಲಿಯ ರಾಬಿನ್ಸನ್​​ ಕ್ಯೊಸೆ ಎಂದು ಹೆಚ್ಚು ಫೇಮಸ್​ ಆಗಿದ್ದರು. ಇವರು 1989ರಿಂದ ಉತ್ತರ ಸಾರ್ಡಿನಿಯಾದ ಐಡೆಲ್ ಆಫ್ ಬುಡೆಲ್ಲಿ ಎಂಬಲ್ಲಿ ವಾಸವಾಗಿದ್ದರು.

ಇಟಲಿ ಸರ್ಕಾರ ಈ ದ್ವೀಪವನ್ನ ರಾಷ್ಟ್ರೀಯ ಉದ್ಯಾನವನ್ನಾಗಿ ಪರಿವರ್ತನೆ ಮಾಡುವ ಇರಾದೆಯನ್ನು ಹೊಂದಿದ್ದು, ಇದೇ ಕಾರಣಕ್ಕೆ ಮೊರಾಂಡಿಗೆ ಸಾಕಷ್ಟು ನೋಟಿಸ್​ಗಳು ಬಂದಿವೆ.

ಲಾಮಾಡಲೇನಾದ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ದ್ವೀಪವನ್ನು ಪರಿಸರ ಶಿಕ್ಷಣದ ಕೇಂದ್ರವಾಗಿ ಪರಿವರ್ತಿಸಲು ಬಯಸಿದ್ದರಿಂದ ದ್ವೀಪದ ಮಾಲೀಕ ಮೊರಾಂಡಿಯನ್ನು ಸ್ಥಳಾಂತರಿಸುತ್ತಿದ್ದಾರೆ.

ಮೊರಾಂಡಿ ಏಪ್ರಿಲ್​ 25ರಂದು ಫೇಸ್​ಬುಕ್​ನಲ್ಲಿ ಭಾವನಾತ್ಮಕ ಪೋಸ್ಟ್ ಶೇರ್​ ಮಾಡಿದ್ದರು. ‘ನಾನು ಕಳೆದ 32 ವರ್ಷಗಳಿಂದ ಬುಡೆಲ್ಲಿಯನ್ನ ಸಂರಕ್ಷಿಸಿದಂತೆ ಮುಂದೆಯೂ ಸಂರಕ್ಷಿಸಲ್ಪಡುತ್ತದೆ ಎಂಬ ನಂಬಿಕೆಯೊಂದಿಗೆ ನಾನು ಹೊರಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಇಟಲಿಯ ರಾಜಕೀಯ ಪರಿಸ್ಥಿತಿಯಿಂದ ಬೇಸರಗೊಂಡಿದ್ದ ಮೊರಾಂಡಿ ಈ ರೀತಿ ಪ್ರತ್ಯೇಕವಾಗಿ ಹೊಸ ಜೀವನ ನಡೆಸುತ್ತಿದ್ದರು

See also  ಅಂತಾರಾಷ್ಟ್ರೀಯ ಗಡಿಗಳನ್ನು ತೆರೆದಿದ ಅಮೆರಿಕ: ಭಾರತೀಯರು ಸೇರಿದಂತೆ ರಾಷ್ಟ್ರಗಳ ಇತರೆ ಪ್ರಜೆಗಳಿಗೆ ಪ್ರಯಾಣಕ್ಕೆ ಅನುಮತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು