News Kannada
Sunday, September 25 2022

ದೇಶ-ವಿದೇಶ

ಹತ್ತು ಬಾರಿ ಪರೀಕ್ಷಿಸಿದರು ನೆಗೆಟಿವ್ ಬಂದಿದ್ದರು, ಕೊನೆಗೆ ಕೊರೊನಾದಿಂದ ಸಾವನಪ್ಪಿದ ಮಹಿಳೆ - 1 min read

Photo Credit :

ಹತ್ತು ಬಾರಿ ಪರೀಕ್ಷಿಸಿದರು ನೆಗೆಟಿವ್ ಬಂದಿದ್ದರು, ಕೊನೆಗೆ ಕೊರೊನಾದಿಂದ ಸಾವನಪ್ಪಿದ ಮಹಿಳೆ

ಲಂಡನ್​: ಕೊರೊನಾ ಸೋಂಕು ಎಲ್ಲ ರೋಗಿಗಳಲ್ಲಿ ಒಂದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಅದೆಷ್ಟೋ ಮಂದಿಗೆ ರೋಗ ಲಕ್ಷಣವಿಲ್ಲದೇ ಸೋಂಕು ಅತಿರೇಕಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಘಟನೆ ಬ್ರಿಟನ್ ನಲ್ಲಿ ದಾಖಲಾಗಿದೆ. ಆದರೆ ಸತ್ತ ಮೇಲೆ ಕರೊನಾದಿಂದಾಗಿಯೇ ಸತ್ತಿದ್ದಾಗಿ ವರದಿ ಬಂದಿದ್ದು ಕುಟುಂಬವೇ ಶಾಕ್ ಆಗಿದೆ.

 

ಬ್ರಿಟನ್​ನ ಡೆಬ್ರಾ ಶಾ(56) ಹೆಸರಿನ ಮಹಿಳೆ ಆಪರೇಷನ್​ ಒಂದರ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಆಪರೇಷನ್​ ಮಾಡಿ, ಅದರಿಂದ ಗುಣಮುಖವಾಗುವ ಸಮಯದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಪರೀತ ಜ್ವರ, ಉಸಿರಾಟ ತೊಂದರೆಗಳು ಕಾಣಿಸಿಕೊಂಡಿವೆ. ಆ ಹಿನ್ನೆಲೆಯಲ್ಲಿ ಆಕೆಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಮೊದಲನೇ ವರದಿಯಲ್ಲಿ ಕರೊನಾ ನೆಗೆಟಿವ್​ ಬಂದಿದೆ. ಸತತ 10 ದಿನಗಳ ಕಾಲ 10 ಬಾರಿ ಪರೀಕ್ಷೆ ಮಾಡಲಾಗಿದೆ. ಎಲ್ಲ ವರದಿಯಲ್ಲಿ ಆಕೆಗೆ ಕೊರೊನಾ ನೆಗೆಟಿವ್​ ಬಂದಿದೆ.

 

ಆಪರೇಷನ್​ ಮುಗಿದು 15 ದಿನಗಳಿಗೆ ಡೆಬ್ರಾ ಕೊನೆಯುಸಿರೆಳೆದಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಡೆಬ್ರಾಗೆ ಕರೊನಾ ಇದ್ದಿದ್ದು, ಅದರಿಂದಲೇ ಸಾವನ್ನಪ್ಪಿರುವುದಾಗಿ ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಆಕೆಯನ್ನು ಕೋವಿಡ್ ವಾರ್ಡ್​ನ ಬದಲಾಗಿ ಸಾಮಾನ್ಯ ವಾರ್ಡ್​ನಲ್ಲೇ ಇಡಲಾಗಿತ್ತು. ಪಿಪಿಇ ಕಿಟ್​ ಇಲ್ಲದೆಯೇ ಆಕೆಯ ಸಂಬಂಧಿಗಳು ಆಕೆಯೊಂದಿಗಿದ್ದರು. 

See also  ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು