ಲಖನೌ: ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ನಡುವೆಯೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ಕರೊನಾ ಹೋಗಲಾಡಿರುವ ಗೋಮೂತ್ರ ಸೇವಿಸುವಂತೆ ಕರೆ ನೀಡಿದ್ದಾರೆ.ಸ್ವತಃ ಗೋಮೂತ್ರ ಕುಡಿಯುತ್ತಿರುವ ವಿಡಿಯೋವನ್ನು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬೈರಿಯಾ ಕ್ಷೇತ್ರ ಶಾಸಕ ಸುರೇಂದ್ರ ಸಿಂಗ್ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಗೋಮೂತ್ರವನ್ನು ಸರಿಯಾಗಿ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ಪ್ರದರ್ಶಿಸಿದ್ದಾರೆ. ಗೋಮೂತ್ರದಿಂದ ವೈರಸ್ ಹರಡುವುದನ್ನು ನಿಯಂತ್ರಿಸಬಹುದು. ಒಂದು ದಿನದಲ್ಲಿ 18 ಗಂಟೆ ಕೆಲಸ ಮಾಡಿದರೂ ನಾನು ಆರೋಗ್ಯದಿಂದ್ದೇನೆ ಅಂದ್ರೆ ಅದಕ್ಕೆ ಕಾರಣ ಗೋಮೂತ್ರ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ. ಹೇಗೆ ಸೇವಿಸಬೇಕೆಂದು ಶಾಸಕರು ವಿವರಣೆ ನೀಡಿದ್ದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ತೆಗೆದುಕೊಳ್ಳಬೇಕು. ಎರಡರಿಂದ ಮೂರು ಮುಚ್ಚಳ ಗೋಮೂತ್ರ ತೆಗೆದುಕೊಂಡು ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಕುಡಿಯಬೇಕೆಂದು ತಿಳಿಸಿದ್ದಾರೆ. ನಾನು ವಿಜ್ಞಾನವನ್ನು ನಂಬುತ್ತೀನೋ, ಇಲ್ಲವೋ. ಆದರೆ, ಹಸುವಿನ ಮೂತ್ರವನ್ನು ನಾನು ಸಂಪೂರ್ಣವಾಗಿ ನಂಬುತ್ತೇನೆ ಎಂದಿರುವ ಸುರೇಂದ್ರ ಸಿಂಗ್, ಗೋಮೂತ್ರ ಸೇವಿಸುವಾಗ ಒಂದು ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ. ಅದೇನೆಂದರೆ, ಗೋಮೂತ್ರ ಸೇವಿಸಿದ ಅರ್ಧ ಗಂಟೆಯವರೆಗೆ ಏನನ್ನು ಸೇವಿಸಬೇಡಿ ಎಂದಿದ್ದಾರೆ. ಕೇವಲ ಕರೊನಾಗೆ ಮಾತ್ರವಲ್ಲ ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಗೋಮೂತ್ರಕ್ಕೆ ಇದೆ ಎಂದಿದ್ದಾರೆ. ಇದೇ ವೇಳೆ ಉತ್ತಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹುರಿದ ಅರಿಶಿನ ಪುಡಿಯನ್ನು ಸೇವಿಸುವಂತೆ ಶಿಫಾರಸು ಮಾಡಿದರು.
ಕರೊನಾ ನಿಯಂತ್ರಣಕ್ಕೆ ಗೋಮೂತ್ರ ಸೇವಿಸಲು ಕರೆ ಕೊಟ್ಟ ಬಿಜೆಪಿ ಶಾಸಕ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.