News Kannada
Monday, October 03 2022

ದೇಶ-ವಿದೇಶ

ವರ್ಚುವಲ್ ರೀತಿಯಲ್ಲಿ ಸಂಸದೀಯ ಸಮಿತಿಗಳ ಸಭೆ ನಡೆಸಲು ಟಿಎಂಸಿ ಆಗ್ರಹ - 1 min read

Photo Credit :

ವರ್ಚುವಲ್ ರೀತಿಯಲ್ಲಿ ಸಂಸದೀಯ ಸಮಿತಿಗಳ ಸಭೆ ನಡೆಸಲು ಟಿಎಂಸಿ ಆಗ್ರಹ

ನವದೆಹಲಿ: ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಕುರಿತು ಚರ್ಚಿಸಲು ವರ್ಚುವಲ್ ಸ್ವರೂಪದಲ್ಲಿ ಸಂಸದೀಯ ಸಮಿತಿ ಸಭೆಗಳನ್ನು ನಡೆಸಬೇಕು ಎಂದು ಆಗ್ರಹಪಡಿಸಿ ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ತೃಣಮೂಲ ಕಾಂಗ್ರೆಸ್ ಪಕ್ಷವು ಪತ್ರ ಬರೆದಿದೆ.

ಈ ವಿಚಾರ ಕುರಿತು ಟಿಎಂಸಿ ಬರೆಯುತ್ತಿರುವ ಮೂರನೇ ಪತ್ರ ಇದು. ಮೊದಲನೆ ಪತ್ರವನ್ನು 2020ರ ಜುಲೈ ಮತ್ತು ಎರಡನೇ ಪತ್ರವನ್ನು ಆಗಸ್ಟ್ 2020ರಲ್ಲಿ ಬರೆಯಲಾಗಿತ್ತು ಎಂದು ಪಕ್ಷವು ತಿಳಿಸಿದೆ.

‘ದೇಶದಲ್ಲಿ ಪ್ರಸ್ತುತ ನಿತ್ಯ 3 ಲಕ್ಷಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಈಗಿನ ಪರಿಸ್ಥಿತಿಯಲ್ಲಿ ಸಂಸದೀಯ ಸಮಿತಿಗಳು, ಇಲಾಖಾ ಸಮಿತಿಗಳು ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಸಭೆಗಳನ್ನು ವರ್ಚುವಲ್‌ ರೂಪದಲ್ಲಿ ನಡೆಸುವುದನ್ನು ಪರಿಶೀಲಿಸಬೇಕು’ ಎಂದು ರಾಜ್ಯಸಭೆ ಸದಸ್ಯ, ಟಿಎಂಸಿ ರಾಷ್ಟ್ರೀಯ ವಕ್ತಾರ ಡೆರೆಕ್ ಒಬ್ರಿಯಾನ್ ಹೇಳಿದರು.

‘ಪಕ್ಷವು ರಾಜ್ಯಸಭೆ ಅಧ್ಯಕ್ಷರ ಕಚೇರಿಯಿಂದ ಆಗಸ್ಟ್‌ 27ರಂದು ಪತ್ರವನ್ನು ಸ್ವೀಕರಿಸಿದ್ದು, ಈ ಬೇಡಿಕೆ ಕುರಿತ ವಿಷಯವನ್ನು ಸಂಸತ್ತಿನ ಉಭಯ ಸದನಗಳ ನಿಯಮಗಳ ಸಮಿತಿಗೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದೆ’ ಎಂದು ಹೇಳಿದರು.

See also  ಡೊನಾಲ್ಡ್ ಟ್ರಂಪ್ ಮಹತ್ವದ ಮುನ್ನಡೆ, ಇಂದು ರಾತ್ರಿ ಮಹತ್ವದ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು