News Kannada
Thursday, September 29 2022

ದೇಶ-ವಿದೇಶ

ಸುಳ್ಳು ಸುದ್ದಿಗಳ ಹರಿವಿಕೆಯ ವಿರುದ್ಧ ಫೇಸ್‌ಬುಕ್ ಅಭಿಯಾನ - 1 min read

Photo Credit :

ಸುಳ್ಳು ಸುದ್ದಿಗಳ ಹರಿವಿಕೆಯ ವಿರುದ್ಧ ಫೇಸ್‌ಬುಕ್ ಅಭಿಯಾನ

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ , ಚಿತ್ರಗಳನ್ನು ನಿರ್ಬಂಧಿಸುವ ಉದ್ದೇಶದಿಂದ ಅದರಲ್ಲಿಯೂ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಹೊಸ ಅಭಿಯಾನ ಆರಂಭಿಸುತ್ತಿರುವುದಾಗಿ ಫೇಸ್‌ಬುಕ್ ಹೇಳಿದೆ . 

 

ಕೊರೋನಾ ಸಂಕಷ್ಟದ ಸಮಯದಲ್ಲಿ ಜಾಗತಿಕವಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಕೋವಿಡ್’ಗೆ ಸಂಬಂಧಿಸಿದ ಹಾಗೂ ಲಸಿಕೆಗಳ ಕುರಿತಾದ 12 ಮಿಲಿಯನ್ ಸುಳ್ಳು ಹಾಗೂ ತಪ್ಪು ಸುದ್ದಿಗಳನ್ನು , ಮಾಹಿತಿಗಳನ್ನು ತೆಗೆದುಹಾಕಿದೆ . ಫೇಸ್‌ಬುಕ್ ಗ್ರಾಹಕರಿಗೆ ತಪ್ಪು ಸಂದೇಶಗಳನ್ನು ರವಾನಿಸಿದಂತೆ ತಡೆಯಲು ಫೇಸ್‌ಬುಕ್ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ . ಫೇಸ್‌ಬುಕ್ ಕೋವಿಡ್ -19 ತಪ್ಪು ಮಾಹಿತಿಯ ವಿರುದ್ಧ ಹೋರಾಡಲು 6 ಸುಲಭ ಟಿಪ್ಸ್ ಅಭಿವೃದ್ಧಿಪಡಿಸಿದೆ . ಈ ಟಿಪ್ಸ್ ಫೇಸ್‌ಬುಕ್‌ ಸರಣಿ ಜಾಹೀರಾತುಗಳ ಮೂಲಕ ಪ್ರದರ್ಶಿಸಲಿದೆ . 

 

ಈ ಅಭಿಯಾನ ಇಂಗ್ಲಿಷ್ , ಕನ್ನಡ , ಹಿಂದಿ , ತಮಿಳು , ತೆಲುಗು , ಒರಿಯಾ , ಮಲಯಾಳಂ , ಮರಾಠಿ , ಗುಜರಾತಿ ಮತ್ತು ಬಂಗಾಳಿ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ನಡೆಯಲಿದ್ದು, ಅದರೊಂದಿಗೆ ಸುಳ್ಳು ಮಾಹಿತಿಗಳನ್ನು ಹರಡುವ ಮೊದಲು ಪರಿಶೀಲಿಸಲು ಕೆಲ ಸೂಚನೆಗಳನ್ನು ನೀಡಿದೆ . 

 

1. ಸಂಪೂರ್ಣ ಮಾಹಿತಿ ಪಡೆಯಿರಿ , ಬರೀ ಹೆಡ್‌ಲೈನ್ ಮಾತ್ರ ಅಲ್ಲ . 

2. ವಿಶ್ವಾಸಾರ್ಹ ಮೂಲಗಳಲ್ಲಿ ಪರಿಶೀಲನೆ ಮಾಡಿ ( ಉದಾ : www.mygov.in/covid-19 )

 3. ವಾಸ್ತವಗಳನ್ನು ಹಂಚಿಕೊಳ್ಳಿ , ವದಂತಿಗಳನ್ನಲ್ಲ . 

4. ವಿಶ್ವಾಸಾರ್ಹ ಮೂಲಗಳಿಂದ ಸಂಪೂರ್ಣ ಸಂದರ್ಭ ತಿಳಿದುಕೊಳ್ಳಿ .

5. ಬಂಧುಮಿತ್ರರಿಗೆ ಅವರು ತಪ್ಪಾದ ಮಾಹಿತಿ ಹಂಚಿಕೊಂಡಾಗ ತಿಳಿಸಿ . 

6. ಷೇರ್ ಮಾಡುವ ಮುನ್ನ ತಡೆಯಿರಿ . 

 

ಕೋವಿಡ್ -19 ರ ಕುರಿತಂತೆ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಪೂರೈಸುವ ಪ್ರಯತ್ನದ ನಿಟ್ಟಿನಲ್ಲಿ ಫೇಸ್‌ಬುಕ್ ದೇಶದ ಮುಂಚೂಣಿಯ ವೆದರೊಂದಿಗೆ ಅಭಿಯಾನವನ್ನೂ ಆರಂಭಿಸಿದೆ . ಈ ಅಭಿಯಾನವು 12 ವಿಡಿಯೋಗಳ ಸರಣಿಯನ್ನೂ ಒಳಗೊಂಡಿದ್ದು , ಅದರಲ್ಲಿ ವೈದ್ಯರು ಕೋವಿಡ್ -19 ಕುರಿತಾದ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. 

See also  ನೀಸ್ ನಲ್ಲಿ ಉಗ್ರರ ಭೀಕರ ದಾಳಿ: 84 ಕ್ಕೂ ಅಧಿಕ ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು