ಕೊಚ್ಚಿ : ಕೊರೋನಾ ಸೋಂಕಿಗೆ ತುತ್ತಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಮೇಲೆ ಆ್ಯಂಬುಲೆನ್ಸ್ ಸಹಾಯಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಏಪ್ರಿಲ್ 27 ರಂದು ಈ ಘಟನೆ ನಡೆದಿದ್ದು, ಕೊರೋನಾ ಸೋಂಕಿಗೆ ತುತ್ತಾಗಿದ್ದ ರೋಗಿ ಚೇತರಿಸಿಕೊಂಡ ಬಳಿಕ ವೈದ್ಯರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ . ಪ್ರಕರಣ ದಾಖಲಾದ ನಂತರ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಕಳೆದ ವರ್ಷ ಕೂಡ ಕೇರಳದ ಇದೇ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್ ನಲ್ಲಿ ಕೊರೋನಾ ಸೋಂಕಿತ ರೋಗಿಯ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು, ಇದೀಗ ಮತ್ತೆ ಅಂತಹಗೆ ಘಟನೆ ಮರುಕಳಿಸಿದೆ.