News Kannada
Sunday, December 04 2022

ದೇಶ-ವಿದೇಶ

ಸುಳ್ಳು ಅತ್ಯಾಚಾರ ಕೇಸ್​​ನಲ್ಲಿ 31 ವರ್ಷ ಜೈಲು ಶಿಕ್ಷೆ; 550 ಕೋಟಿ ರೂ. ಪರಿಹಾರ ನೀಡಿದ ಕೋರ್ಟ್!

Photo Credit :

ಸುಳ್ಳು ಅತ್ಯಾಚಾರ ಕೇಸ್​​ನಲ್ಲಿ 31 ವರ್ಷ ಜೈಲು ಶಿಕ್ಷೆ;  550 ಕೋಟಿ ರೂ. ಪರಿಹಾರ ನೀಡಿದ ಕೋರ್ಟ್!

11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಹೆನ್ರಿ ಮ್ಯಾಕ್​ಕಲಂ ಹಾಗೂ ಲಿಯೋನ್​ ಬ್ರೌನ್​​ ಎಂಬ ಇಬ್ಬರು ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇವರ ಮೇಲಿನ ರೇಪ್​​ & ಮರ್ಡರ್​ ಕೇಸ್​ ಖುಲಾಸೆಯಾಗಿದ್ದು, ನಾರ್ತ್​ ಕೆರೊನಿಯಾ ಕೋರ್ಟ್​ 75 ಮಿಲಿಯನ್​ ( 550 ಕೋಟಿ ರೂ.) ಹಣವನ್ನು ಪರಿಹಾರವಾಗಿ ನೀಡಿದೆ.
1983ರಲ್ಲಿ 11 ವರ್ಷ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಹೆನ್ರಿ, ಲಿಯೋನ್​ರನ್ನು ಬಂಧಿಸಲಾಗಿತ್ತು. ಬಂಧನಕ್ಕೊಳಗಾದಾಗ ಹೆನ್ರಿಗೆ 19 ವರ್ಷ ಹಾಗೂ ಲಿಯೋನ್​ಗೆ 15 ವರ್ಷ ವಯಸ್ಸಾಗಿತ್ತು. ಆಗ ಪ್ರಕರಣದ ತನಿಖೆ ನಡೆಸಿದ್ದ ಕೋರ್ಟ್​ ಇಬ್ಬರಿಗೂ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಕೋರ್ಟ್​ನ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಿದ ಬಳಿಕ 2014ರಲ್ಲಿ ಇಬ್ಬರೂ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಅಷ್ಟರಲ್ಲಿ ಆಗಲೇ ಬರೋಬ್ಬರಿ 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಇಬ್ಬರು ತಮ್ಮ ಯವ್ವನವನ್ನು ಕಂಬಿಗಳ ಹಿಂದೆಯೇ ಕಳೆದಿದ್ದರು.ಇನ್ನು ಡಿಎನ್​ಎ ಪರೀಕ್ಷೆಯಲ್ಲಿ ಇಬ್ಬರು ಅತ್ಯಾಚಾರವೆಸಗಿಲ್ಲ ಎಂಬುವುದು ಸಾಬೀತಾಗಿತ್ತು. ತಮ್ಮ ವಿರುದ್ಧದ ಸುಳ್ಳು ಆರೋಪ ಹಾಗೂ ಶಿಕ್ಷೆಯ ವಿರುದ್ಧ ಹೆನ್ರಿ, ಲಿಯೋನ್ ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದರು. ಇಬ್ಬರಿಗೂ ಆದ ನೋವು, ನಷ್ಟವನ್ನು ಪರಿಗಣಿಸಿದ ನಾರ್ತ್​ ಕೆರೊಲಿನಾ ಕೋರ್ಟ್​​ ಈಗ 75 ಮಿಲಿಯನ್​ ಹಣವನ್ನು ಪರಿಹಾರವಾಗಿ ನೀಡಿದೆ. ಜೈಲಿನಲ್ಲಿ ಕಳೆದ ಪ್ರತಿ ವರ್ಷಕ್ಕೂ 1 ಮಿಲಿಯನ್​​ ನಂತೆ ತಲಾ 31 ಮಿಲಿಯನ್​​ ಜೊತೆ ಹೆಚ್ಚುವರಿಯಾಗಿ 13 ಮಿಲಿಯನ್​ ಸೇರಿಸಿ ಒಟ್ಟು 75 ಮಿಲಿಯನ್​​ ಹಣವನ್ನು ಇಬ್ಬರಿಗೂ ಪರಿಹಾರವಾಗಿ ನೀಡಲಾಗಿದೆ.
ಕೋರ್ಟ್​ನ ಆದೇಶದ ಬಗ್ಗೆ ಸಂತತ ಹಂಚಿಕೊಂಡ ಹೆನ್ರಿ ಕೊನೆಗೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದಿದ್ದಾರೆ. ಜೈಲಿನಲ್ಲಿ ಇನ್ನೂ ನಮ್ಮಂತೆಯೇ ಅನೇಕ ಮುಗ್ಧರು ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾಡದ ತಪ್ಪಿಗೆ ಅವರು ಅನುಭವಿಸುತ್ತಿರುವ ನೋವು ಸಹಿಸುವಂತಹದಲ್ಲ ಎಂದು ಲಿಯೋನ್​ ಅಸಮಾಧಾನ ಹೊರ ಹಾಕಿದ್ದಾರೆ. ಹೆನ್ರಿ ಹಾಗೂ ಲಿಯೋನ್​ ಇಬ್ಬರು ಕಪ್ಪು ವರ್ಣಿಯರಾಗಿದ್ದು, ಲಿಯೋನ್​ ಅಂಗವೈಕಲ್ಯವನ್ನೂ ಹೊಂದಿದ್ದಾರೆ.
ಕಪ್ಪು ವರ್ಣೀಯರ ವಿರುದ್ಧ ಪೂರ್ವಗ್ರಹ ಪೀಡಿತರಾಗಿ ತನಿಖೆ ನಡೆಸಿದ್ದರಿಂದಲೇ ಹೆನ್ರಿ, ಲಿಯೋನ್​ ಮಾಡದ ತಪ್ಪಿಗೆ ಶಿಕ್ಷ ಅನುಭವಿಸುವಂತಾಗಿದ್ದು ಎಂದು ಹಲವರು ಆರೋಪಿಸಿದ್ದಾರೆ. ಇನ್ನು ಕೆಲವರು ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣದಿಂದ ಹಲವರು ಅಮೆರಿಕದ ನ್ಯಾಯಾಲಯಗಳನ್ನು ಟೀಕಿಸುತ್ತಿದ್ದರೆ, ಇನ್ನು ಹಲವರು ಪರಿಹಾರ ನೀಡಿದ ಕೋರ್ಟ್​​ನ ತೀರ್ಮಾನವನ್ನು ಪ್ರಶಂಸಿಸಿದ್ದಾರೆ.

See also  ಫ್ರಾನ್ಸ್‌ ಮಸೀದಿ ಗೋಡೆಯಲ್ಲಿ ಇಸ್ಲಾಂ ವಿರೋಧಿ ಬರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು