News Kannada
Monday, December 05 2022

ದೇಶ-ವಿದೇಶ

ಖಾತೆದಾರರ ೮ ಕೋಟಿ ಹಣ ಕದ್ದಿದ್ದ ಕೇರಳದ ಬ್ಯಾಂಕ್‌ ಉದ್ಯೋಗಿಯ ಬಂಧನ

Photo Credit :

ಖಾತೆದಾರರ ೮ ಕೋಟಿ ಹಣ ಕದ್ದಿದ್ದ ಕೇರಳದ ಬ್ಯಾಂಕ್‌ ಉದ್ಯೋಗಿಯ ಬಂಧನ

ತಿರುವನಂತಪುರಂ: ಕೇರಳದ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ವಿವಿಧ ಖಾತೆಗಳಿಂದ ಒಟ್ಟು ₹8 ಕೋಟಿ ಎಗರಿಸಿದ ಪ್ರಕರಣ ವರದಿಯಾಗಿದೆ. ಪತ್ತನಂತಿಟ್ಟದ ಕೆನರಾ ಬ್ಯಾಂಕ್‌ ಶಾಖೆಯ ಉದ್ಯೋಗಿ ವಿಜೀಶ್ ವರ್ಗೀಸ್ ಎಂಬಾತ ನಿಶ್ಚಿತ ಠೇವಣಿ ಹೊಂದಿದ್ದ ಆದರೆ ಚಾಲೂ ಇಲ್ಲದ ಖಾತೆಗಳಿಂದ ಹಣ ತೆಗೆಯುತ್ತಿದ್ದ ಎನ್ನಲಾಗಿದೆ.
ಬಳಕೆಯಾಗದೇ ಇರುವ ಖಾತೆಗಳನ್ನು ಗುರುತಿಸುತ್ತಿದ್ದ ವಿಜೀಶ್, ಕಳೆದ ಫೆಬ್ರವರಿಯಲ್ಲಿ ಮತ್ತೋರ್ವ ಬ್ಯಾಂಕ್ ಉದ್ಯೋಗಿಯ ಎಫ್‌ಡಿ ಖಾತೆಯನ್ನು ಆಕಸ್ಮಿಕವಾಗಿ ಮುಚ್ಚಿದಾಗ ಈತನ ವಂಚನೆ ಬೆಳಕಿಗೆ ಬಂದಿದೆ. ವಿಜೀಶ್ ಈ ಮೊದಲು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ವಿಜೀಶ್ ತಪ್ಪಿಸಿಕೊಂಡಿದ್ದು, ನಂತರ ಕಳೆದ ಭಾನುವಾರ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ, ಕೇರಳಕ್ಕೆ ಕರೆತರಲಾಗಿದೆ. ಬ್ಯಾಂಕ್ ಖಾತೆಗಳಿಂದ ಎಗರಿಸಿದ ಹಣವನ್ನು ಆನ್‌ಲೈನ್ ಗೇಮ್ ಮತ್ತು ಷೇರು ವ್ಯವಹಾರದಲ್ಲಿ ಬಳಸಿಕೊಂಡಿರುವುದಾಗಿ ವಿಜೀಶ್ ಪೊಲೀಸರಿಗೆ ತಿಳಿಸಿದ್ದಾನೆ.

See also  ಆ್ಯಪಲ್ ಉದ್ಯೋಗಿ ಹತ್ಯೆ: ಎನ್ ಕೌಂಟರ್ ಅಲ್ಲವೆಂದ ಸಿಎಂ ಆದಿತ್ಯನಾಥ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು