ನವದೆಹಲಿ : ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಈಗಾಗಲೇ ಕೊರೋನಾ ಸೋಂಕನ್ನು ಕೇಂದ್ರಸರ್ಕಾರಿ ಸೇರಿಸಿದ್ದು, ಇದೀಗ ಹೊಸದಾಗಿ ಹರಡುತ್ತಿರುವ ಬ್ಲ್ಯಾಕ್ಕ್ ಫಂಗಸ್ ನನ್ನು ಇದೇ ಪಟ್ಟಿಗೆ ಸೇರಿಸಬೇಕು ಎಂದು ರಾಜ್ಯಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಈ ಮೂಲಕ ಬ್ಲ್ಯಾಕ್ ಫಂಗಸ್ ಕೂಡ, ಈಗ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಸೇರ್ಪಡೆಗೊಂಡಂತೆ ಆಗಿದ್ದು, ಸಾಮಾನ್ಯವಾಗಿ ಕಪ್ಪು ಶಿಲೀಂಧ್ರ ಎಂದು ಕರೆಯಲ್ಪಡುವ ಮ್ಯೂಕಾರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸೂಚಿಸಬಹುದಾದ ರೋಗವನ್ನಾಗಿ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಮೇ 20 ರ ಗುರುವಾರ ರಾಜ್ಯಗಳಿಗೆ ಸೂಚಿಸಿದೆ.
ಇದರೊಂದಿಗೆ, ‘ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳು, ವೈದ್ಯಕೀಯ ಕಾಲೇಜುಗಳು ಎಂಒಎಚ್ ಎಫ್ ಡಬ್ಲ್ಯೂ ಮತ್ತು ಐಸಿಎಂಆರ್ ಹೊರಡಿಸಿದ ತಪಾಸಣೆ, ರೋಗನಿರ್ಣಯ, ಮ್ಯೂಕಾರ್ಮೈಕೋಸಿಸ್ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಅನುಸರಿಸಬೇಕು’ ಎಂದು ಸಚಿವಾಲಯ ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಿದೆ.