ನವದೆಹಲಿ: ಕೆಲ ದಿನಗಳ ಹಿಂದಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೂರನೇ ಅಲೆ ಹಾಗೂ ಸಿಂಗಪುರ್ ಅಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರದ ಕುರಿತು ನೀಡಿದ ಹೇಳಿಕೆಗೆ ಇದೀಗ ದೆಹಲಿ ಹೈಕೋರ್ಟ್ ಪ್ರತ್ಯುತ್ತರ ನೀಡಿದೆ.
ಸರ್ಕಾರ ಸ್ಪಷ್ಟವಾಗಿರಲಿ, ಸಿಂಗಾಪುರದಿಂದ ಯಾವುದೇ ಅಲೆ ಇಲ್ಲ. “ನಮಗೆ ಬೇರೆ ದೇಶಗಳ ಅಗತ್ಯವಿಲ್ಲ, ನಮ್ಮದೇ ಆದ ರೂಪಾಂತರಗಳಿವೆ” ಎಂದು ನ್ಯಾಯಾಲಯ ಹೇಳಿದೆ. ಈ ಮೂಲಕ ದೆಹಲಿ ಸಿಎಂ ಹೇಳಿದ ಮಾತುಗಳನ್ನು ಟೀಕಿಸಿದೆ.