News Kannada
Friday, January 27 2023

ದೇಶ-ವಿದೇಶ

ಲಸಿಕೆ ಕೊರತೆ ; 18ರಿಂದ 44 ವರ್ಷದವರಿಗೆ ವಿತರಣೆ ಸ್ಥಗಿತ

Photo Credit :

  ಲಸಿಕೆ ಕೊರತೆ ;  18ರಿಂದ 44 ವರ್ಷದವರಿಗೆ ವಿತರಣೆ ಸ್ಥಗಿತ

ಬೆಂಗಳೂರು: ಕೋವಿಡ್ ಲಸಿಕೆ ಕೊರತೆ ಇರುವ ಕಾರಣ ರಾಜ್ಯದಲ್ಲಿ ಸದ್ಯಕ್ಕೆ 18ರಿಂದ 44 ವರ್ಷದವರಿಗೆ ಲಸಿಕೆ ವಿತರಿಸದಿರಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಪ್ರಕಟಣೆ ಹೊರಡಿಸಿದ್ದಾರೆ. 18ರಿಂದ 44 ವರ್ಷ ವಯೋಮಾನದವರಿಗೆ ನೀಡಲು ಸದ್ಯಕ್ಕೆ ಕೋವಿಡ್ ಲಸಿಕೆ ಲಭ್ಯವಿಲ್ಲ.
ಆದರೆ, ರಾಜ್ಯದಲ್ಲಿ ಗುರುತಿಸಿರುವ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಮತ್ತು ಆದ್ಯತೆ ಗುಂಪಿನವರಿಗೆ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ಪಡೆಯುವ ದಿನಾಂಕ ಮತ್ತು ಸಮಯದ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ 18ರಿಂದ 44 ವರ್ಷದವರೆಗಿನ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಶನಿವಾರದಿಂದ ಲಸಿಕೆ ವಿತರಣೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿತ್ತು. ಆದರೆ, ಈ ಬಗ್ಗೆ ಲಸಿಕೆ ವಿತರಿಸುವ ಆಸ್ಪತ್ರೆಗಳಿಗೆ ಸೂಕ್ತ ನಿರ್ದೇಶನ ನೀಡಿರದ ಕಾರಣ 45 ವರ್ಷದೊಳಗಿನ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ವಿತರಣೆ ನಡೆಯಲಿಲ್ಲ. ಇದರಿಂದಾಗಿ ಅವರು ಲಸಿಕೆ ಕೇಂದ್ರಗಳಿಗೆ ತೆರಳಿ, ವಾಪಸ್ ತೆರಳಬೇಕಾಯಿತು.‘ಸದ್ಯ 45 ವರ್ಷ ಮೇಲ್ಪಟ್ಟವರಿಗೆ ‘ಕೋವಿಶೀಲ್ಡ್’ ಮೊದಲ ಡೋಸ್ ನೀಡಲಾಗುವುದು. ಅರ್ಹ ಫಲಾನುಭವಿಗಳು ನಗರ ಪ್ರದೇಶಗಳಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನೇರವಾಗಿ ಲಸಿಕಾ ಕೇಂದ್ರಕ್ಕೆ ತೆರಳಿ, ಲಸಿಕೆ ಪಡೆಯಬಹುದಾಗಿದೆ. ಎರಡನೇ ಡೋಸ್ ಪಡೆಯುವವರು ನೇರವಾಗಿ ಹತ್ತಿರದ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕೋವ್ಯಾಕ್ಸಿನ್ ಮೊದಲ ಡೋಸ್ ಸದ್ಯಕ್ಕೆ ಲಭ್ಯವಿಲ್ಲ. ಎರಡನೇ ಡೋಸ್ ಪಡೆಯಬೇಕಾದ ಫಲಾನುಭವಿಗಳ ಮೊಬೈಲ್‌ಗೆ ದೂರವಾಣಿ ಸಂದೇಶ ಕಳುಹಿಸಲಾಗುತ್ತದೆ. ಅಂತಹವರು ಲಸಿಕಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ತೆರಳಿ, ಲಸಿಕೆ ಪಡೆಯಬಹುದು’ ಎಂದು ಹೇಳಿದ್ದಾರೆ.

See also  ಅಮೆರಿಕದಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಒಮಿಕ್ರಾನ್‌ ನ ಆರ್ಭಟ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು