ನವದೆಹಲಿ : ಕೊರೋನಾ ಪ್ರೋಟೋಕಾಲ್ ಉಲ್ಲಂಘಿಸಿ ಮಧುರೈಯಿಂದ ಬೆಂಗಳೂರಿಗೆ ಪ್ರೈಸ್ ಜೆಟ್ ವಿಶೇಷ ವಿಮಾನ ಬುಕ್ ಮಾಡಿ , ವಿಮಾನ ಹಾರಾಡುತ್ತಿದ್ದ ವೇಳೆ ಮದುವೆಯಾದ ಪ್ರಕರಣವನ್ನು ನಾಗರಿಕ ವಿಮಾನಯಾನ ಇಲಾಖೆ ಗಂಭೀರವಾಗಿ ಪರಿಗಣಿಸಿದೆ .
ವಿಮಾನದಲ್ಲಿ ಸಾಮಾಜಿಕ ಅಂತರ ಕಾಪಾಡದವರ ವಿರುದ್ಧ ಸಂಬಂಧಪಟ್ಟ ಇಲಾಖೆ ಬಳಿ ದೂರು ದಾಖಲಿಸುವಂತೆ ಸ್ಟೈಸ್ ಜೆಟ್ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ .
ಇನ್ನು ವಿಮಾನದಲ್ಲಿದ್ದ ಸಿಬ್ಬಂದಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಆಲೋಚಿಸಿರುವ ಇಲಾಖೆ ಆ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ.