ಚೆನ್ನೈ : ಕಳೆದ ಎರಡು ಮೂರು ದಿನಗಳಿಂದ ಸುದ್ದಿಯಲ್ಲಿದ್ದ ಖಾಸಗಿ ವಿದ್ಯಾಸಂಸ್ಥೆಯ ಶಿಕ್ಷಕನ ಮೇಲಿನ ಆರೋಪಕ್ಕೆ ಇಂದು ಹೊಸದೊಂದು ತಿರುವು ಸಿಕ್ಕಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸುತ್ತಿದ್ದ ಶಿಕ್ಷಕ ಜಿ ರಾಜಗೋಪಾಲನ್ ಪೊಲೀಸರ ಅತಿಥಿಯಾಗಿದ್ದಾನೆ .
ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಈ ಶಿಕ್ಷಕ ರಾಜಗೋಪಾಲ್ ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ವಿದ್ಯಾರ್ಥಿನಿಯರು ಆರೋಪಿಸಿದ್ದು, ಸರಿಯಾದ ಕ್ರಮ ಕೈಗೊಳ್ಳುವಂತೆ ನೆನ್ನೆ ಆನ್ಲೈನ್ ಅಭಿಯಾನವನ್ನು ಕೂಡ ನಡೆಸಿದ್ದರು.
ಚೆನ್ನೈನ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ರಾಜಗೋಪಾಲನ್ ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ . ಆನ್ ಲೈನ್ ಕ್ಲಾಸ್ ವೇಳೆ ಕೇವಲ ಮೈಗೆ ಟವೆಲ್ ಸುತ್ತಿ ಪಾಠ ಮಾಡುತ್ತಿದ್ದ ಎಂಬ ಆರೋಪ ಕೂಡ ಈತನ ವಿರುದ್ಧ ಕೇಳಿ ಬಂದಿದೆ .