ಮುಂಬೈ : ಯಾಸ್ ಚಂಡಮಾರುತ ದೇಶದ ಕೆಲವು ಭಾಗದಲ್ಲಿ ಅಪ್ಪಳಿಸಿದ್ದು, ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಿಂದ ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳಬೇಕಾದ ವಿಮಾನಗಳನ್ನು ರದ್ದುಪಡಿಸಲಾಗಿದೆ .
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು, ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ . ಭುವನೇಶ್ವರಕ್ಕೆ ತೆರಳಬೇಕಾದ ವಿಮಾನಗಳನ್ನು ಸದ್ಯಕ್ಕೆ ರದ್ದುಪಡಿಸಲಾಗಿದೆ . ಮುಂದೆ ಪರಿಸ್ಥಿತಿ ಪರಾಮರ್ಶಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ .
ಯಾಸ್ ಚಂಡಮಾರುತದ ಪರಿಣಾಮ ಒಡಿಶಾದ ಕರಾವಳಿ ಮತ್ತು ಉತ್ತರದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ . ನಾಳೆ ಯಾಸ್ ಚಂಡಮಾರುತ ಜಾರ್ಖಂಡ್ ತಲುಪುವ ಸಾಧ್ಯತೆ ಇದೆ .
ಇದೇ ವೇಳೆ ಇನೊಂದೆಡೆ ಇದಕ್ಕಿದ್ದ ಹಾಗೆ ನೀರಿನ ಪ್ರಮಾಣ ಹೆಚ್ಚಾದ ಕಾರಣ ತೊಂದರೆಗೆ ಸಿಲುಕಿದ್ದ 50 ಮಂದಿಯನ್ನು ಯೋಧರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.