ಕ್ಯಾಲಿಫೋರ್ನಿಯಾ: ಭಾರತದ ಪ್ರತಿಯೊಂದು ಸಂಪ್ರದಾಯ, ಆಚರಣೆಗಳಿಗೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ ಕುಳಿತಿದ್ದರೆ, ಭಾರತೀಯರು ನಿಜಕ್ಕೂ ತಲೆತಗ್ಗಿಸಬೇಕಾದ ಟ್ರೆಂಡ್ ಒಂದು ಅಮೆರಿಕದಲ್ಲಿ ಶುರುವಾಗಿದೆ. ಭಾರತೀಯರು ಗೋಮಾತೆ ಎಂದು ಪೂಜಿಸುವ ಹಸುಗಳನ್ನು ತಬ್ಬಿಕೊಂಡರೆ ಎಷ್ಟೋ ಸಮಸ್ಯೆಗಳಿಂದ ಮುಕ್ತಿ ಸಿಗಬಹುದು ಎಂದು ಅರ್ಥ ಮಾಡಿಕೊಂಡಿರುವ ಅಮೆರಿಕನ್ನರು ಇದೀಗ ಹಣ ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.
ಕೌ ಹಗ್ಗಿಂಗ್ (COW HUGGING- ಹಸುಗಳನ್ನು ಅಪ್ಪಿಕೊಳ್ಳುವುದು) ಎಂಬ ಟ್ರೆಂಡ್ ಶುರುವಾಗಿದ್ದು, ಒಮ್ಮೆ ಹಸು ಅಪ್ಪಿಕೊಳ್ಳಲು ಒಂದು ತಾಸಿಗೆ 200 ಡಾಲರ್ (ಸುಮಾರು 15 ಸಾವಿರ ರೂ.) ಕೊಟ್ಟು ಹಸುಗಳನ್ನು ತಬ್ಬಿಕೊಳ್ಳುತ್ತಿದ್ದಾರೆ.
ಕೆಲ ಪ್ರದೇಶಗಳಲ್ಲಿ ಇದಕ್ಕೆ ಸೆಷನ್ಗಳನ್ನು ಆರಂಭಿಸಲಾಗಿದೆ. ನಂಬಲು ಅಸಾಧ್ಯ ಅಂದರೆ, ಜುಲೈ ವರೆಗೂ ಬುಕಿಂಗ್ ಆಗಿದ್ದು, ಹಸುಗಳು ಸಿಗುತ್ತಿಲ್ಲವಂತೆ! ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅರಿಜೋನಾದ 5 ಎಕರೆ ಪ್ರದೇಶದಲ್ಲಿ ಇರುವ ಎಮಿಸ್ ಫಾರ್ಮ್ ಅನಿಮಲ್ ಸೆಂಚುರಿ, ಅಮೆರಿಕದ ಅಭಯಾರಣ್ಯಗಳಲ್ಲಿ ಹಸುಗಳನ್ನು ತಬ್ಬಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಕೋವಿಡ್ನ ಈ ಅವಧಿಯಲ್ಲಿ ಭಯಭೀತರಾಗಿರುವ ಸಂದರ್ಭದಲ್ಲಿ ಹಸುಗಳನ್ನು ತಬ್ಬಿಕೊಂಡರೆ ಉಲ್ಲಾಸದ ಭಾವನೆ ಮೂಡುತ್ತದೆ. ಇದರಿಂದ ಅನೇಕ ಸಮಸ್ಯೆಗಳು, ರಕ್ತದೊತ್ತಡ, ಹೃದಯ ಸಮಸ್ಯೆ, ಬೆನ್ನು ನೋವು ಸೇರಿಂದಂತೆ ಹಲವು ಮಾನಸಿಕ ಸಮಸ್ಯೆಗಳಿಂದ ಹೊರಬರಲು ನೆರವಾಗುತ್ತದೆ, ಇದು ಸಾಬೀತಾಗಿದೆ ಕೂಡ ಎನ್ನುತ್ತಾರೆ ಇಲ್ಲಿಯ ಜನರು.
ತಾಯಿಯ ಮಡಿಲಲ್ಲಿ ಮಲಗಿಕೊಂಡರೆ ತಮ್ಮ ಸಮಸ್ಯೆಗಳನ್ನು ಮರೆತುಹೋಗುತ್ತಾರೆ. ಅದೇ ರೀತಿ ಹಸುವನ್ನು ಅಪ್ಪಿಕೊಂಡರೆ ತಮ್ಮ ಚಿಂತೆಗಳನ್ನು ಮರೆತು ಹೋಗುತ್ತಾರೆ ಎನ್ನುತ್ತಾರೆ ಅವರು. ಅಮೆರಿಕ ಮಾತ್ರವಲ್ಲದೇ ನೆದರ್ಲೆಂಡ್, ಸ್ವಿಜರ್ಲ್ಯಾಂಡ್, ಬ್ರಿಟನ್ನಲ್ಲಿಯೂ ಈ ರೀತಿಯ ಚಿಕಿತ್ಸಾ ಪದ್ಧತಿ ಇದೆ ಎನ್ನಲಾಗಿದೆ. ಭಾರತದಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ಗುರುಗ್ರಾಮದಲ್ಲಿ ಹಸುವನ್ನು ಅಪ್ಪಿಕೊಳ್ಳುವ ಕೇಂದ್ರವನ್ನು ಆರಂಭಿಸಿದೆ.
ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.