ಜಾರ್ಖಂಡ್ : ಯಾಸ್ ಚಂಡಮಾರುತದ ಹೊಡೆತಕ್ಕೆ ಅನೇಕ ಸಂಪತ್ತು ಹಾನಿಯಾಗಿದ್ದು, ಆ ಸಮಯದಲ್ಲಿ ಭಾರೀ ಮಳೆಯಿಂದಾಗಿ ರಾಂಚಿಯ ಕಾಂಚಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹರಾಡಿ ಬುಧಾಡಿ ಸೇತುವೆ ಕುಸಿದಿದೆ .
ಮೂರು ವರ್ಷಗಳ ಹಿಂದೆ ತಮರ್ ಬ್ಲಾಕ್ ಯೋಜನೆಯಡಿಯಲ್ಲಿ 1 ಕೋಟಿ ರೂ . ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು . ಈ ಸೇತುವೆ ತಮಾಡ್ , ಬುಂಡು ಮತ್ತು ಸೋನಾಹತು ಪ್ರದೇಶಗಳನ್ನು ಸಂಪರ್ಕಿಸುತ್ತದೆ .
ಈ ಸೇತುವೆ ಮುರಿದು ಬೀಳಲು ಕಾಂಚಿ ನದಿ ತೀರದಲ್ಲಿ ಅಕ್ರಮವಾಗಿ ಸಾಗಿಸುತ್ತಿರುವ ಮರಳು ತಂದೆಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಮರಳು ದಂಧೆ ನಡೆಸುತ್ತಿದ್ದಾರೆ . ರಾಂಚಿಯಲ್ಲಿ ಚಂಡಮಾರುತದ ಪರಿಣಾಮ ಸತತ ಎರಡು ದಿನಗಳ ಕಾಲ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟವು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.