ನವದೆಹಲಿ: ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ರಾಷ್ಟ್ರೀಯವಾದಿ, ದಾರ್ಶನಿಕ ವೀರ್ ಸಾವರ್ಕರ್ ಅವರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಮಹಾನ್ ಸೇನಾನಿ, ರಾಷ್ಟ್ರಭಕ್ತ ಸಾವರ್ಕರ್ ಅವರಿಗೆ ನಮನ ಸಲ್ಲಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರತಿಯೊಬ್ಬ ರಾಷ್ಟ್ರೀಯವಾದಿಗಳ ಹೃದಯ ಮತ್ತು ಮನಸ್ಸಿನಲ್ಲಿ ವೀರ ಸಾವರ್ಕರ್ ಸ್ಥಾನ ಪಡೆದಿದ್ದಾರೆ ಎಂದಿದ್ದಾರೆ.
ಸಾವರ್ಕರ್ 1883 ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು. ನಾಸಿಕ್ ಜಿಲ್ಲೆಯಲ್ಲಿ ಹುಟ್ಟಿದ ವಿ.ಡಿ.ಸಾವರ್ಕರ್ ಸ್ವಾತಂತ್ರ್ಯವೀರ ಸಾವರ್ಕರ್ ಅಥವಾ ಸಾವರ್ಕರ್ ಎಂದೇ ಭಾರತದಾದ್ಯಂತ ಜನಪ್ರಿಯ. ಹಿಂದೂ ಮಹಾಸಭಾವನ್ನು ಮುನ್ನಡೆಸಿಕೊಂಡು ಹೋಗಿ ಹಿಂದುತ್ವವನ್ನು ಜನಪ್ರಿಯಗೊಳಿಸಿದರು.