ಪಟ್ನಾ: ಪತಿಯೇ ಮುಂದೆನಿಂತು ಪತ್ನಿ ಹಾಗೂ ಪ್ರಿಯಕರನನ್ನು ಒಂದು ಮಾಡುವ ಘಟನೆಗಳು ಕೇವಲ ಸಿನಿಮಾಗಳಲ್ಲಿ ಮಾತ್ರ ಕಂಡುಬರುತ್ತಿದ್ದವು. ಆದರೆ ಅಂತಹದೇ ಒಂದು ಘಟನೆ ಬಿಹಾರದ ಗ್ರಾಮವೊಂದರಲ್ಲಿ ನಡೆದಿದೆ.
ಬಿಹಾರದ ಛಪ್ರಾ ಗ್ರಾಮದಲ್ಲಿ ಪತಿಯೇ ಪ್ರಿಯಕರ ಹಾಗೂ ಪತ್ನಿಯನ್ನು ಒಂದು ಮಾಡಿರುವಂತಹ ಘಟನೆ ನಡೆದಿದ್ದು, ಈ ಮದುವೆ ಮುಗಿದ ಮೇಲೆ ಮರಳುತ್ತಿದ್ದ ಜೋಡಿಯ ಚಿತ್ರವನ್ನು ಅಲ್ಲಿಯೇ ಇದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ ವೈರಲ್ ಆಗಿದೆ.
ನಿಕ್ಕಿ ಎಂಬುವವಳು ಮದುವೆಯಾಗಿ ಒಂದು ಹೆಣ್ಣು ಮಗುವಿಗೆ ತಾಯಿಯಾದ ನಂತರವೂ ಆಕೆಯ ಪ್ರಿಯಕರನೊಂದಿಗೆ ಹೋರಾಟ ನಡೆಸುತ್ತಿದ್ದದ್ದು ಪತಿಗೆ ತಿಳಿದುಬಂದಿದೆ. ವಿಷಯ ಪತಿಯ ಗಮನಕ್ಕೆ ಬಂದ ನಂತರ ಅವರಿಬ್ಬರಿಗೆ ಮದುವೆ ಮಾಡಿಸುವ ಕೆಲಸ ಪತಿಯ ಮಾಡಿದ್ದಾನೆ.
ನಮಗೆ ಮಗುವಿದ್ದು, ಆ ಮಗುವನ್ನು ನಾನು ನೋಡಿಕೊಳ್ಳುತ್ತೇನೆ. ಸದ್ಯ ಪತ್ನಿ ಚೆನ್ನಾಗಿದ್ದರೆ ಸಾಕು ಎಂದು ಪತಿ ಹೇಳಿದರೆ, ಪತ್ನಿ ಬೇರೆಯ ರೀತಿಯಲ್ಲಿ ಹೇಳುತ್ತಿದ್ದಾಳೆ. ಪತಿಯಿಂದ ತನಗೆ ತೊಂದರೆ ಉಂಟಾಗುತ್ತಿತ್ತು, ಆತ ಹಿಂಸೆ ಕೊಡುತ್ತಿದ್ದ, ಅದನ್ನು ತಾಳಲಾರದೆ ತನ್ನ ಪ್ರಿಯಕರನನ್ನು ಹುಡುಕಿ ಹೋದನೆಂದು ಹೇಳಿದ್ದು, ಇನ್ನು ಪತಿಯ ಬಳಿಗೆ ಬರುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ಆದರೆ ಮಗುವಿನ ಕುರಿತು ಯಾವುದೇ ಮಾತುಗಳನ್ನಾಡದೇ ಪತಿಯೊಂದಿಗೆ ಮಗುವನ್ನು ಕಳಿಸಲು ಬಹಳ ಸುಲಭವಾಗಿ ಒಪ್ಪಿರುವುದು ಕಂಡುಬಂದಿದೆ.