ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ವಿಮರ್ಶಕ ಕಮಲ್ ಖಾನ್ ನಡುವಿನ ದ್ವೇಷ ಮತ್ತೊಂದು ಹಂತಕ್ಕೆ ಹೋಗಿದೆ. ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿ ಸಲ್ಮಾನ್ ಕೆಂಗಣ್ಣಿಗೆ ಗುರಿಯಾಗಿದ್ದ ಕಮಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಬಳಿಕ ರೊಚ್ಚಿಗೆದ್ದಿರುವ ಕಮಲ್ ಖಾನ್ ವಿರುದ್ಧ ಸಿಡಿದು ನಿಂತಿದ್ದಾರೆ.
ಸಲ್ಮಾನ್ ವಿರುದ್ಧ ಟ್ವೀಟ್ ಮಾಡಿರುವ ಕಮಲ್ ‘ಬಾಲಿವುಡ್ ಗೂಂಡಾ, ನಿಮಗೆ ಧೈರ್ಯ ಇದ್ದರೆ ಮುಂದೆ ನಿಂತು ಹೋರಾಡಿ. ಚೀಪ್ ಗಾಯಕರು ಮತ್ತು ಕಷ್ಟಪಡುತ್ತಿರುವ ನಟಿಯರ ಹಿಂದೆ ಅಡಗಿಕೊಳ್ಳಬೇಡಿ. ನಾನು ಪ್ರತಿಜ್ಞೆ ಮಾಡುತ್ತೇನೆ ನಿಮ್ಮ ವೃತ್ತಿಜೀವನವನ್ನು ನಾಶಮಾಡಿ ನಿಮ್ಮನ್ನು ಒಬ್ಬ ಟಿವಿ ನಟನನ್ನಾಗಿ ಮಾಡುತ್ತೇನೆ’ ಎಂದಿದ್ದಾರೆ.
ಈ ಟ್ವೀಟ್ ನಲ್ಲಿ ಎಲ್ಲೂ ಸಲ್ಮಾನ್ ಖಾನ್ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಇದು ಸಲ್ಮಾನ್ ಖಾನ್ ಗೆ ಹೇಳಿರುವುದು ಎನ್ನುವುದು ಸಲ್ಮಾನ್ ಅಭಿಮಾನಿಗಳಿಗೆ ತಿಳಿದಿದೆ. ಈ ಬಗ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಮಾತಿನಚಕಮಕಿ ಬಳಿಕ ಕಮಲ್ ಖಾನ್ ತನ್ನ ಟ್ವಿಟ್ಟರ್ ಖಾತೆಯನ್ನು ಲಾಕ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ 5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕಮಲ್ ಇದೀಗ ತನ್ನ ಫಾಲೋ ಮಾಡುವವರಿಗೆ ಮಾತ್ರ ಟ್ವೀಟ್ ಕಾಣುವಂತೆ ಆಗುವಂತೆ ಸೆಟ್ಟಿಂಗ್ ಮಾಡಿದ್ದಾರೆ. ಬಾಲಿವುಡ್ ಬಿಗ್ ಸ್ಟಾರ್ ನನ್ನು ಎದುರುಹಾಕಿಕೊಂಡಿರುವ ಕಮಲ್ ಖಾನ್ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.
ಸಲ್ಮಾನ್ ಒಬ್ಬ ಗೂಂಡಾ, : ಟ್ವೀಟ್ ಮಾಡಿ ಖಾತೆ ಲಾಕ್ ಮಾಡಿದ ಕಮಲ್ ಖಾನ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.