News Kannada
Friday, December 02 2022

ದೇಶ-ವಿದೇಶ

ಟೀಕೆಗಳಿಂದ ನೋವಾಗಿದೆ ಎಂದ ಸಚಿವ ಯೋಗೇಶ್ವರ್‌

Photo Credit :

ಟೀಕೆಗಳಿಂದ ನೋವಾಗಿದೆ ಎಂದ ಸಚಿವ ಯೋಗೇಶ್ವರ್‌

ಮೈಸೂರು, ; “ಕಳೆದ‌ ಮೂರು ದಿನಗಳಿಂದ ಮಾಧ್ಯಮಗಳ ಹಾಗೂ ನನ್ನ ಸ್ನೇಹಿತರು ನನ್ನನ್ನು ಖಳನಾಯಕನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ” ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಹೇಳಿದರು.
ಮಂಗಳವಾರ ಸಂಜೆ ಸಚಿವರು ದಿಢೀರ್ ಆಗಿ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಪೊಲೀಸ್ ಭದ್ರತೆ ಇಲ್ಲದೇ, ಖಾಸಗಿ ಕಾರಿನಲ್ಲಿ ಸಚಿವರು ಆಗಮಿಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಯಿತು. ಮಠದ ಆವರಣದಲ್ಲಿ ಮಾತನಾಡಿದ ಸಚಿವರು, “ಸ್ವಾಮೀಜಿಗಳ ಮುಂದೆ ನೋವನ್ನು ಹೇಳಿಕೊಂಡರೆ‌‌ ಹಗುರವಾಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ” ಎಂದು ತಿಳಿಸಿದರು. “ಸಿನಿಮಾದಲ್ಲೂ ನಾಯಕ, ರಾಜಕೀಯದಲ್ಲೂ‌ ನಾನು‌ ನಾಯಕನಾಗಿದ್ದೇನೆ. ಆದರೆ ನನ್ನನ್ನು ಖಳನಾಯನನ್ನಾಗಿ ಮಾಡಲು ಯತ್ನ ನಡೆದಿದೆ. ಇದರ ಹಿಂದೆ ಯಾರದ್ದೋ ಪ್ರಚೋದನೆ ಇರಬಹುದು” ಎಂದು ಬೇಸರ ವ್ಯಕ್ತಪಡಿಸಿದರು.
“ವೈಯುಕ್ತಿಕವಾಗಿ ನಾನು‌ ನೀಡಿದ ಒಂದು ಹೇಳಿಕೆಯಿಂದ ಇಷ್ಟೆಲ್ಲ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ. ನಾನು ಬೇರೆ ಮಾತನಾಡುವುದಿಲ್ಲ” ಎಂದು ಸ್ಪಷ್ಟಪಡಿಸಿ ಯೋಗೀಶ್ವರ್ ನಿರ್ಗಮಿಸಿದರು. “ಎಸ್ಕಾರ್ಟ್ ಇಲ್ಲದೆ‌‌ ಮಠಕ್ಕೆ ಬಂದಿರುವುದರಲ್ಲಿ ವಿಶೇಷವಿಲ್ಲ. ಕೊರೊನಾ‌ ಹಿನ್ನಲೆಯಲ್ಲಿ ನಾನು ಎಸ್ಕಾರ್ಟ್ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದದೂ ನಾನು ಸಚಿವ. ಪೊಲೀಸರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶವಾಗಿದೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆರಂಭವಾಗಿದೆ. ಇಂತಹ ಸಮಯದಲ್ಲಿ ಸಿ. ಪಿ. ಯೋಗೀಶ್ವರ್ ದೆಹಲಿಗೆ ಭೇಟಿ ನೀಡಿದ್ದ ಭಾರೀ ಚರ್ಚೆಗೆ ಕಾರಣವಾಗಿತ್ತು. ಹಲವು ಬಿಜೆಪಿ ನಾಯಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೆಹಲಿಗೆ ಭೇಟಿ ನೀಡಿದ್ದು ನಿಜ ಎಂದು ಸಚಿವರು ಸಹ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

See also  ಲಸಿಕೆ ಕೊರತೆ ; 18ರಿಂದ 44 ವರ್ಷದವರಿಗೆ ವಿತರಣೆ ಸ್ಥಗಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು