ನವದೆಹಲಿ : ಕೊರೊನಾ ಸೋಂಕಿನಿಂದ ದೇಶ ತತ್ತರಿಸಿ ಹೋಗಿದ್ದು, ಎರಡನೇ ಅಲೆ ಸಂದರ್ಭದಲ್ಲಿ ಅನೇಕ ವೈದ್ಯರು ತಮ್ಮ ಜೀವವನ್ನು ಮುಡಿಪಾಗಿಟ್ಟು ಸೇವೆಯಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ 646 ವೈದ್ಯರು ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಹೇಳಿದೆ.
ಮೊದಲ ಅಲೆಯ ಸಂದರ್ಭದಲ್ಲಿ ಕಳೆದ ವರ್ಷವಿಡೀ 748 ಜನ ವೈದ್ಯರು ಕರೊನಾಕ್ಕೆ ಬಲಿಯಾಗಿದ್ದರು. ಎರಡನೇ ಅಲೆಯಲ್ಲಿ ಕಡಿಮೆ ಅವಧಿಯಲ್ಲೇ ಹೆಚ್ಚು ವೈದ್ಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅದರಲ್ಲೂ ದೆಹಲಿಯಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, 109 ವೈದ್ಯರು ಕರೊನಾಗೆ ಬಲಿಯಾಗಿದ್ದಾರೆ. ಬಿಹಾರದಲ್ಲಿ 96 ವೈದ್ಯರು ಮೃತಪಟ್ಟಿದ್ದರೆ, ಉತ್ತರಪ್ರದೇಶದಲ್ಲಿ 79 ವೈದ್ಯರು ಮೃತಪಟ್ಟಿದ್ದಾರೆ. ರಾಜಸ್ಥಾನ- 43, ಝಝಾರ್ಕಂಡ್-39, ಗುಜರಾತ್-37, ಆಂಧ್ರಪ್ರದೇಶ-35, ತೆಲಂಗಾಣ-34, ತಮಿಳುನಾಡು-32ಮತ್ತು ಪಶ್ಚಿಮ ಬಂಗಾಳ-30 ಸಾವು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಇನ್ನು, ಕರ್ನಾಟಕದಲ್ಲಿ 9 ವೈದ್ಯರು ಮರಣ ಹೊಂದಿದ್ದಾರೆ ಎಂದು ಐಎಂಎ ಕೋವಿಡ್ 19 ರಿಜಿಸ್ಟ್ರಿಯ ಜೂನ್ 2 ರವರೆಗಿನ ಮಾಹಿತಿ ತಿಳಿಸಿದೆ.