News Kannada
Tuesday, November 29 2022

ದೇಶ-ವಿದೇಶ

ಕನ್ನಡದಲ್ಲೇ ಇಂಜಿನಿಯರಿಂಗ್ ;ಎಐಸಿಟಿಇ ಒಪ್ಪಿಗೆ - 1 min read

Photo Credit :

ಕನ್ನಡದಲ್ಲೇ ಇಂಜಿನಿಯರಿಂಗ್ ;ಎಐಸಿಟಿಇ ಒಪ್ಪಿಗೆ

ಎಲ್ಲವನ್ನೂ ಮಾತೖಭಾಷೆಯಲ್ಲೇ ಕಲಿಯುವಂತಾಗಿದ್ದರೆ ಇಂದು ಮತ್ತಷ್ಟು ಉನ್ನತ ಹುದ್ದೆಗಳಲ್ಲಿ ಕನ್ನಡಿಗರು, ಅದರಲ್ಲೂ ಗ್ರಾಮೀಣ ಭಾಗದ ಜನರೇ ಇರುತ್ತಿದ್ದರು. ಗ್ರಾಮೀಣ ಭಾಗದ ಬಹಳಷ್ಟು ಜನರಿಗೆ ಇಂಗ್ಲಿಷ್ ಕಬ್ಬಿಣದ ಕಡಲೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದೀಗ ಇಂಗ್ಲಿಷ್​ನಲ್ಲಿದ್ದ ವಿಷಯಗಳನ್ನು ಕನ್ನಡದಲ್ಲಿ ಕಲಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಅಂದರೆ, ಕನ್ನಡದಲ್ಲಿ ಇಂಜಿನಿಯರಿಂಗ್ ಮಾಡಲು ಅವಕಾಶ ಕಲ್ಪಿಸುತ್ತಿದೆ. ಇದರಿಂದಾಗಿ ಇಂಜಿನಿಯರಿಂಗ್​ನಲ್ಲಿ ಇಂಗ್ಲಿಷ್​ನ ತೊಡಕಿನಿಂದಾಗಿ ಸರಾಗವಾಗಿ ಪಾಸಾಗದೇ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಧೈರ್ಯದಿಂದ, ಆತ್ಮವಿಶ್ವಾಸದಿಂದ ಇಂಜಿನಿಯರಿಂಗ್ ಕೋರ್ಸ್ ಮುಗಿಸಬಹುದಾಗಿದೆ. ಸರ್ಕಾರದ ಈ ಹೊಸ ನಿರ್ಧಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಹೊಸ ಕನಸನ್ನು ಹುಟ್ಟುಹಾಕಿದೆ.
ಎಐಸಿಟಿಇ ಸೂಚನೆ ನೀಡುತ್ತಿದಂತೆಯೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್ ಬೋಧನೆ ಮಾಡುವುದಕ್ಕಾಗಿ ಪಠ್ಯಕ್ರಮ ಸಿದ್ಧಪಡಿಸಿಕೊಳ್ಳುತ್ತಿದೆ. ಕನ್ನಡದಲ್ಲಿ ತಾಂತ್ರಿಕ ಕೋರ್ಸ್ ಪಡೆಯಲು ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ವಿಟಿಯು ಈ ಹಿಂದೆಯೇ ಸಿದ್ಧತೆ ನಡೆಸುತ್ತಿತ್ತು. ಇಂಜಿನಿಯರಿಂಗ್ ಶಿಕ್ಷಣ ನೀಡಬೇಕಾದಲ್ಲಿ ಅದಕ್ಕೆ ಬೇಕಾದ ಪಠ್ಯಪುಸ್ತಕವನ್ನು ರಚಿಸಬೇಕಾಗಿದೆ. ಆಂಗ್ಲ ಭಾಷೆಯಲ್ಲಿರುವ ಪಠ್ಯಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಇದಕ್ಕಾಗಿ ವಿಟಿಯು ವಿಷಯ ತಜ್ಞರ ಸಮಿತಿ ರಚಿಸಿದ್ದು, ಸಮಿತಿಯು ಅನುವಾದ ಕಾರ್ಯವನ್ನು ಕೈಗೆತ್ತಿ ಕೊಂಡಿದೆ. ಬೇಗ ಕನ್ನಡ ಪಠ್ಯ ಸಿದ್ಧವಾಗಲಿದೆ ಎನ್ನುತ್ತವೆ ವಿಟಿಯು ಮೂಲಗಳು. ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಮಾತೖಭಾಷೆಯಲ್ಲಿ ಶಿಕ್ಷಣ ಪಡೆದಿರುತ್ತಾರೆ. ನಮ್ಮ ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆಯಲ್ಲಿ ಉತ್ತೀರ್ಣರಾಗುವುದು ಬಹಳ ಕಷ್ಟದ ವಿಷಯವಾಗಿದೆ. ಈ ಕಾರಣದಿಂದಲೇ ಬಹುತೇಕ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ಹಿಂಜರಿಯುತ್ತಾರೆ. ಬದಲಾಗಿ ಕಲಾ ಅಥವಾ ವಾಣಿಜ್ಯ ವಿಷಯ ತೆಗೆದುಕೊಂಡು ವ್ಯಾಸಂಗ ಮಾಡುತ್ತಾರೆ. ಇದೀಗ ಕನ್ನಡದಲ್ಲೇ ಇಂಜಿನಿಯರಿಂಗ್ ವ್ಯಾಸಂಗ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದು, ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿ ಗಳು ಇಂಜಿನಿಯರಿಂಗ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ಲೇಸ್​ವೆುಂಟ್​ಗೆ ಆಂಗ್ಲಭಾಷೆ ಮುಖ್ಯವಾಗಿರುತ್ತದೆ. ಬಹುರಾಷ್ಟಿŠೕಯ ಕಂಪನಿಗಳು ಕೇವಲ ಆಂಗ್ಲಭಾಷೆ ಮಾತ್ರವಲ್ಲ, ವಿದೇಶಿ ಭಾಷೆಯನ್ನು ಕಲಿತಿದ್ದರೆ ಉತ್ತಮ ಎಂಬ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಹುಡುಕುವುದರಿಂದ ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಕ್ಯಾಂಪಸ್ ಇಂಟರ್​ವ್ಯೂನಲ್ಲಿ ಉದ್ಯೋಗ ಪಡೆದುಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ಕನ್ನಡದ ಜತೆ ಆಂಗ್ಲ ಭಾಷೆಯ ಜ್ಞಾನವೂ ಇದ್ದರೆ ಒಳ್ಳೆಯದು ಎಂಬುದು ಎಲ್ಲರ ಅಭಿಪ್ರಾಯ.
ಇಡೀ ದೇಶದ ಇಂಜಿನಿಯರಿಂಗ್ ಕಾಲೇಜುಗಳಿಗೆ ನೀತಿ ನಿಯಮ ರೂಪಿಸುವ ಎಐಸಿಟಿಇ ಅಧ್ಯಕ್ಷರಾಗಿರುವ ಅನಿಲ್ ಸಹಸ್ರಬುದ್ಧೆ ಅವರು ಕನ್ನಡಿಗರು. ಇವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಹುಬ್ಬಳ್ಳಿಯ ಕರ್ನಾಟಕ ವಿಶ್ವವಿದ್ಯಾಲ
ಕೆಲವು ತಾಂತ್ರಿಕ ಪದಗಳ ತರ್ಜುಮೆ ಕಷ್ಟ. ಸ್ಪಲ್ಪ ಅರ್ಥ ವ್ಯತ್ಯಾಸವಾದರೂ ಕಲಿಕೆಗೆ ತೊಡಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಟಿಯು ಆಂಗ್ಲಕನ್ನಡ ತಾಂತ್ರಿಕ ನಿಘಂಟನ್ನು ರೂಪಿಸುತ್ತಿದೆ. ನಿರ್ದಿಷ್ಟ ನಿಘಂಟಿನ ಆಧಾರದಲ್ಲಿ ಪದ ಬಳಕೆ ಮಾಡಲಾಗುತ್ತದೆ. ತಾಂತ್ರಿಕ ವಿಷಯಗಳ ಕನ್ನಡ ತರ್ಜುಮೆಗೂ ಇದು ಸಹಕಾರಿಯಾಗಲಿದೆ ಎಂಬುದು ವಿಟಿಯು ಕುಲಸಚಿವ ಡಾ. ಎ.ಎಸ್. ದೇಶಪಾಂಡೆ ಅವರ ಅಭಿಮತ.
ನಾವು ಮೊದಲಿನಿಂದಲೂ ಕನ್ನಡ ಭಾಷೆಯಲ್ಲೇ ಎಲ್ಲ ಶಿಕ್ಷಣ ನೀಡಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಕನ್ನಡದಲ್ಲೇ ಬರೆಯಲು ಅವಕಾಶ ನೀಡಬೇಕೆಂದು ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲೇ ಇಂಜಿನಿಯರಿಂಗ್ ಶಿಕ್ಷಣ ನೀಡುವುದು ಸ್ವಾಗತಾರ್ಹವಾಗಿದೆ. ವೖತ್ತಿ ಶಿಕ್ಷಣ ಕನ್ನಡದಲ್ಲಿ ನೀಡುವಂತಾದಾಗ ಅದು ಅನ್ನದ ಕೋರ್ಸ್ ಆಗಿ ಮಾರ್ಪಾಡುಗೊಳ್ಳುತ್ತದೆ ಎನ್ನುತ್ತಾರೆ ಕನ್ನಡ ಅಭಿವೖದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ.

See also  ಪಾಕಿಸ್ತಾನದ ಕುತಂತ್ರವನ್ನು ವಿಫಲಗೊಳಿಸಿದ ಭಾರತೀಯ ಭದ್ರತಾ ಪಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು