News Kannada
Friday, December 09 2022

ದೇಶ-ವಿದೇಶ

ದೆಹಲಿಯಲ್ಲಿ 150 ಕೋಟಿ ರೂ. ವಂಚನೆ: ಚೀನೀಯರ ಬಂಧನ

Photo Credit :

 ದೆಹಲಿಯಲ್ಲಿ  150 ಕೋಟಿ ರೂ. ವಂಚನೆ: ಚೀನೀಯರ  ಬಂಧನ

ನವದೆಹಲಿ: ನಕಲಿ ಇನ್​ವೆಸ್ಟ್​ಮೆಂಟ್​ ಆ್ಯಪ್​ಗಳ ಮೂಲಕ 5 ಲಕ್ಷ ಭಾರತೀಯರಿಗೆ 150 ಕೋಟಿ ರೂಪಾಯಿ ವಂಚಿಸಿದ ಚೀನಿಯರ ಗ್ಯಾಂಗ್​ ದೆಹಲಿ ಪೊಲೀಸರ ಬಲೆಗೆ ಬಿದ್ದಿದೆ. ಈ ಗ್ಯಾಂಗ್​ನಲ್ಲಿ ಹನ್ನೊಂದು ಜನರಿದ್ದು, ಈ ಪೈಕಿ ಇಬ್ಬರು ಚಾರ್ರ್ಟಡ್​ ಅಕೌಂಟಟ್ಸ್​. ಬಂಧಿತರನ್ನು ದೆಹಲಿ ನಿವಾಸಿಗಳಾದ ಉಮಾಕಾಂತ ಆಕಾಶ್​ ಜೋಯಿಸ್​, ವೇದಚಂದ್ರ, ಹರಿಓಂ, ಅಭಿಷೇಕ್​ ಮನಸರಮಣಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚೀನಿಯರ ಬೇನಾಮಿ ಕಂಪನಿಗಳ ನಿರ್ದೇಶಕರು. ಈ ಕಂಪನಿ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಅವಿಕ್​ ಕೇಡಿಯಾ ಮತ್ತು ರೋಣಕ್​ ಲೆಕ್ಕ ಪರಿಶೋಧಕರು ಎಂದು ಗುರುತಿಸಲಾಗಿದೆ.
ಚೀನೀಯರ ಪತ್ತೆಗೆ ಶೋಧ ಶುರುವಾಗಿದೆ. ಆ್ಯಪ್​ಗಳ ಮೂಲಕ ಹಣ ಹೂಡಿಕೆ ಮಾಡಿಸಿ ಗರಿಷ್ಠ ರಿಟರ್ನ್ಸ್​ ಕೊಡುವ ಭರವಸೆ ನೀಡುವ ಮಲ್ಟಿಲೆವೆಲ್​ ಮಾರ್ಕೆಟಿಂಗ್​ ಮಾಡೆಲ್​ (ಎಂಎಲ್​ಎಂ) ಮಾದರಿಯಲ್ಲಿ ವಂಚನೆ ನಡೆದಿದೆ ಎಂದು ದೆಹಲಿಯ ಸೈಬರ್​ ಕೆಮ್​ ಸೆಲ್​ನ ಡೆಪ್ಯೂಟಿ ಪೊಲೀಸ್​ ಕಮಿಷನರ್​ ಅನ್ಯೇಶ್​ ರಾಯ್​ ತಿಳಿಸಿದ್ದಾರೆ. ಬಂಧಿತರ ಬ್ಯಾಂಕ್​ ಖಾತೆಯನ್ನು ಸ್ತಂಭನಕ್ಕೊಳಪಡಿಸಿದ್ದು ಅದರಲ್ಲಿ 11 ಕೋಟಿ ರೂಪಾಯಿಗೂ ಅಧಿಕ ಮೊತ್ತ ಇರುವುದನ್ನು ಖಚಿತಪಡಿಸಲಾಗಿದೆ. 97 ಲಕ್ಷ ರೂಪಾಯಿ ನಗದು ಹಣ, 30 ಮೊಬೈಲ್​ ೋನ್​ಗಳನ್ನು ಬಂಧಿತರಿಂದ ವಶಪಡಿಸಲಾಗಿದೆ. ಗೂಗಲ್​ ಪ್ಲೇಸ್ಟೋರ್​ನಲ್ಲಿ ವಂಚಕರು ಸಾಕಷ್ಟು ಆ್ಯಪ್​ಗಳನ್ನು ಅಪ್ಲೋಡ್​ ಮಾಡಿದ್ದು, ಅದನ್ನು ಪ್ಲೇಸ್ಟೋರ್​ ಲಿಸ್ಟ್​ ಕೂಡ ಮಾಡಿದೆ. ಗೊತ್ತಿಲ್ಲ ದವರು ಇಂತಹ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿ ಕೊಂಡು ಸುಲಭವಾಗಿ ವಂಚನೆಗೆ ಒಳಗಾಗುತ್ತಿದ್ದಾರೆ. ನಿಖರವಾಗಿ ಗೊತ್ತಿಲ್ಲದ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡುವ ಮುನ್ನವೇ ಎಚ್ಚರಿಕೆ ವಹಿಸಬೇಕು ಎಂದು ಅನ್ಯೇಶ್​ ರಾಯ್​ ಹೇಳಿದ್ದಾರೆ.
ವಾಟ್ಸ್​ಆ್ಯಪ್​, ಟೆಲಿಗ್ರಾಂ ಮೂಲಕ ಜನರನ್ನು ಸಂಪರ್ಕಿಸುವ ಈ ವಂಚಕರ ಜಾಲ ಪಶ್ಚಿಮ ಬಂಗಾಳ, ನವದೆಹಲಿ, ಬೆಂಗಳೂರು, ಒಡಿಶಾ, ಅಸ್ಸಾಂ, ಸೂರತ್​ಗಳಲ್ಲಿ ಹೆಚ್ಚು ಜನರನ್ನು ಬಲೆಗೆ ಬೀಳಿಸಿಕೊಂಡಿದೆ. ಇಲ್ಲಿನ ಜನರ ಜತೆಗೆ ಒಡನಾಟ ನಡೆಸಲು ಸ್ಥಳಿಯರನ್ನೇ ವೇತನಕ್ಕೆ ನೇಮಕ ಮಾಡಿಕೊಂಡಿದೆ ಎಂದು ಡಿಸಿಪಿ ರಾಯ್​ ಎಚ್ಚರಿಸಿದ್ದಾರೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಈ ವಂಚನೆಯಲ್ಲಿ ಹಲವು ಚೀನೀ ಪ್ರಜೆಗಳು ಭಾಗಿಯಾಗಿದ್ದಾರೆ. ಅವರ ಮಾಹಿತಿ ಲಭಿಸಿದ್ದು, ಶೋಧ ಕಾರ್ಯ ಶುರುವಾಗಿದೆ. 5 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ 150 ಕೋಟಿ ರೂಪಾಯಿಗೂ ಅಧಿಕ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ಇದೆ. ಪೇಮೆಂಟ್​ ಗೇಟ್​ವೇ ಮೂಲಕ ಪಾವತಿಯಾದ 12 ಕೋಟಿ ರೂ. ಖಾತೆಯಲ್ಲಿವೆ. ಇದನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಯ್​ ತಿಳಿಸಿದ್ದಾರೆ.

See also  18 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ ಭಾರತೀಯ ವಿಜ್ಞಾನಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು