News Kannada
Thursday, December 01 2022

ದೇಶ-ವಿದೇಶ

ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಡಿಕ್ಕಿ – ಗರ್ಭಿಣಿ ಸಹಿತ ಮೂವರ ದುರ್ಮರಣ

Photo Credit :

ಟಯರ್ ಸ್ಫೋಟಗೊಂಡು ಅಂಬುಲೆನ್ಸ್  ಡಿಕ್ಕಿ –  ಗರ್ಭಿಣಿ ಸಹಿತ ಮೂವರ ದುರ್ಮರಣ

ಚೆನ್ನೈ: ಟಯರ್ ಸ್ಫೋಟಗೊಂಡು ಜೀವ ಉಳಿಸಬೇಕಾದ ಅಂಬುಲೆನ್ಸ್ ಮರಕ್ಕೆ ಹೊಡೆದ ಪರಿಣಾಮ ತುಂಬು ಗರ್ಭಿಣಿ ಸೇರಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನ ಕಲಕುರಿಚಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಗರ್ಣಿಣಿ ಜಯಲಕ್ಷ್ಮಿ(26), ಅತ್ತೆ ಸೆಲ್ವಿ(55) ಹಾಗೂ ನಾದಿನಿ ಅಂಬಿಕಾ (30) ಎಂದು ಗುರುತಿಸಲಾಗಿದೆ. ಸೊರಪುಟ್ಟ ಗ್ರಾಮದ ನಿವಾಸಿ ಜಯಲಕ್ಷ್ಮಿ ಅವರು 9 ತಿಂಗಳ ಗರ್ಭಿಣಿ. ಇವರಿಗೆ ಗುರುವಾರ ನಸುಕಿನ ಜಾವ 2.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಜಯಲಕ್ಷ್ಮಿ ಪತಿ 108 ಗೆ ಕರೆ ಮಾಡಿದ್ದಾರೆ. ಹೀಗಾಗಿ ಜಯಲಕ್ಷ್ಮಿ ಅತ್ತೆ ಹಾಗೂ ಅವರ ಮಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಅಂಬುಲೆನ್ಸ್ ಹತ್ತಿದ್ದಾರೆ.
ಹೀಗೆ ಅಂಬುಲೆನ್ಸ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಅಂಬುಲೆನ್ಸ್ ಟಯರ್ ಸ್ಫೋಟಗೊಂಡು ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಅಂಬುಲೆನ್ಸ್ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧಿಸಿಂದತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತ ಜಯಲಕ್ಷ್ಮಿ ಕುಟುಂಬಕ್ಕೆ 5 ಲಕ್ಷ ಹಾಗೂ ಅವರ ತ್ತೆ ಹಾಗೂ ನಾದಿನಿ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

See also  ಇಸ್ರೇಲ್ ನಲ್ಲಿ ಕಂಡುಬಂದ ಸಾವಿರ ವರ್ಷ ಹಳೆಯ ಕೋಳಿ ಮೊಟ್ಟೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು