News Kannada
Friday, December 02 2022

ದೇಶ-ವಿದೇಶ

ಹೋಟೆಲ್‌ ಒಳಗೆ ವೇಶ್ಯಾವಾಟಿಕೆ ; ೮ ಜನರ ಬಂಧನ

Photo Credit :

ಹೋಟೆಲ್‌ ಒಳಗೆ ವೇಶ್ಯಾವಾಟಿಕೆ ; ೮ ಜನರ ಬಂಧನ

ಇಂದೋರ್: ಹೊರಗಿನಿಂದ ನೋಡೋಕೆ ಹೋಟೆಲ್ ಬಂದ್​ ಆದಂತೆ ಕಾಣಿಸುತ್ತಿತ್ತು. ಬಾಗಿಲಿಗೆ ಬೀಗ ಹಾಕಿದ್ದರಿಂದ ಕರೊನಾ ಹಿನ್ನೆಲೆ ಮುಚ್ಚಿರಬೇಕು ಎಂದುಕೊಂಡಿದ್ದರು ಸ್ಥಳೀಯರು. ಆದರೆ ಆ ಹೋಟೆಲ್​ ಒಳಗೆ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ!
ಖಚಿತ ಮಾಹಿತಿ ಮೇಲೆಗೆ ಹೋಟೆಲ್​ ಒಳ ಹೊಕ್ಕ ಪೊಲೀಸರು 7 ಮಂದಿ ಪುರುಷರು ಹಾಗೂ ಐವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈ, ದೆಹಲಿ, ಹೈದ್ರಾಬಾದ್​ನಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಾ ಗಿರಾಕಿಗಳನ್ನು ಆಕರ್ಷಿಸುತ್ತಿದ್ದರು. ಈ ದಂಧೆ ಘಟನೆ ಮಧ್ಯಪ್ರದೇಶದ ಇಂದೋರ್​ನ ಬೊಮ್ಮಾಯಿ ಆಸ್ಪತ್ರೆ ಸಮೀಪದ ಹೋಟೆಲ್​ವೊಂದರಲ್ಲಿ ನಡೆದಿದ್ದು, ದಾಳಿ ಮಾಡಿದ ಪೊಲೀಸರು 8 ಯುವಕರು ಮತ್ತು ಹೈದ್ರಾಬಾದ್​ ಮೂಲದ ಇಬ್ಬರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಮೊಬೈಲ್ ಕರೆ ವಿವರಗಳು ಮತ್ತು ಹಣಕಾಸು ವಹಿವಾಟಿನ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕರು ಆರು ಸಾವಿರ ರೂಪಾಯಿ ಪಾವತಿಸಿ ಈ ಹೋಟೆಲ್​ಗೆ ಬರುತ್ತಿದ್ದರು ಎಂದು ಗೊತ್ತಾಗಿದೆ. ಹೋಟೆಲ್​ ಮಾಲೀಕರ ವಿರುದ್ಧವೂ ಕೇಸ್​ ದಾಖಲಾಗಿದೆ.

See also  ಹಿಂಸೆಗೆ ತಿರುಗಿದ ಭಾರತ್ ಬಂದ್: ಆರು ಬಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು