News Kannada
Friday, December 09 2022

ದೇಶ-ವಿದೇಶ

ಛತ್ತೀಸಗಡದಲ್ಲಿ ಭದ್ರತಾ ಪಡೆಗಳಿಗೆ ಶರಣಾದ 13 ಮಂದಿ ನಕ್ಸಲರು

Photo Credit :

ಛತ್ತೀಸಗಡದಲ್ಲಿ  ಭದ್ರತಾ ಪಡೆಗಳಿಗೆ  ಶರಣಾದ  13 ಮಂದಿ ನಕ್ಸಲರು

ಸುಕ್ಮಾ (ಛತ್ತೀಸಗಡ): ಛತ್ತೀಸಗಡದ ಬಸ್ತಾರ್ ಪ್ರದೇಶದ ಎರಡು ಜಿಲ್ಲೆಗಳಲ್ಲಿ ದಂಪತಿ ಸೇರಿದಂತೆ 13 ಮಂದಿ ನಕ್ಸಲರು ಶರಣಾಗಿದ್ದಾರೆ. ಸುಕ್ಮಾ ಜಿಲ್ಲೆಯಲ್ಲಿ ಎಂಟು ನಕ್ಸಲರು ಪೊಲೀಸರು ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾದರು. ನೆರೆಯ ದಂತೇವಾಡ ಜಿಲ್ಲೆಯಲ್ಲೂ ಐವರು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ಎಂಟು ನಕ್ಸಲರ ಪೈಕಿ ವಂಜಮ್ ಭೀಮಾ ಬಂಧನಕ್ಕೆ ಎರಡು ಲಕ್ಷ ರೂ. ಘೋಷಣೆ ಮಾಡಲಾಗಿತ್ತು. ಅವರ ಪತ್ನಿ ಮಾಧವಿ ಕಲಾವತಿ ಕೂಡಾ ಶರಣಾಗಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಲ್. ಧ್ರುವ್ ತಿಳಿಸಿದ್ದಾರೆ. ಇತರೆ ಆರು ಮಂದಿಯನ್ನು ರವಿ, ಕೋಸಾ, ದೇವಾ, ಡಿರ್ಡೊ ಗಂಗಾ, ಸೋಡಿ ದುಲಾ ಮತ್ತು ಕವಾಸಿ ದೇವಾ ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು ಎಂದು ತಿಳಿಸಲಾಗಿದೆ.
ದೇವಾ ಎಂಬವರು ತಮ್ಮ ಬಳಿಯಿದ್ದ ಬಂದೂಕು ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಕ್ಸಲ್ ಚಟುವಟಿಕೆ ತೊರೆದ ಇವರಿಗೆ ತಲಾ ₹10,000 ಪ್ರೋತ್ಸಾಹ ಧನ ನೀಡಲಾಗಿದೆ. ದಂತೇವಾಡದಲ್ಲಿ ಇದುವರೆಗೆ 368 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ನಾಲ್ಕನೇ ಬಾರಿ ರಷ್ಯಾ ಅಧ್ಯಕ್ಷ ಗದ್ದುಗೆಯೇರಿದ ಪುತಿನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು