News Kannada
Wednesday, November 30 2022

ದೇಶ-ವಿದೇಶ

ಮೈಸೂರನ್ನು ಭೂ ಗಳ್ಳ ರಿಂದ ರಕ್ಷಿಸಿ, ಭೂ ಅಕ್ರಮಗಳ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ - 1 min read

Photo Credit :

ಮೈಸೂರನ್ನು ಭೂ ಗಳ್ಳ ರಿಂದ ರಕ್ಷಿಸಿ, ಭೂ ಅಕ್ರಮಗಳ   ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, :- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮೈಸೂರನ್ನು ಭೂಗಳ್ಳರಿಂದ ರಕ್ಷಿಸಿ ಭೂ ಅಕ್ರಮಗಳ ಪಾರದರ್ಶಕ ತನಿಖೆಗೆ ಒತ್ತಾಯಿಸಿ, ಹಿಂದಿನ ಜಿಲ್ಲಾಧಿಕಾರಿ ಮೈಸೂರಿನಲ್ಲಿ ನಡೆಸಿರುವ ಭೂ ಅಕ್ರಮದ ಬಗ್ಗೆ ಮಾಡಿರುವ ಆದೇಶಗಳ ತುರ್ತು ತನಿಖೆಗೆ ಒತ್ತಾಯಿಸಿ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಏಕಾಂಗಿ ಪ್ರತಿಭಟನೆ ನಡೆಸಿದರು.
ಪ್ರಾದೇಶಿಕ ಆಯುಕ್ತರ ಕಛೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ಕಾರಿ ಭೂಮಿಯನ್ನು ಕೊಳ್ಳೆಯ ಹೊಡೆಯಲಾಗಿದೆ. ಅದರ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದರು.ಸಾ.ರಾ.ಕನ್ವೆನ್ಶನ್ ಸೆಂಟರ್ ಗೆ ಸಂಬಂಧಿಸಿ ಸರ್ವೆ ಆಗಬೇಕು. ಸರ್ವೆ ನಂಬರ್ 98 ದಟ್ಟಗಳ್ಳಿ ಅಲ್ಲಿ ಎನ್ ಕ್ರೋಚ್ ಮೆಂಟ್ ಆಗಿದೆ ಅಂತ ದಾಖಲೆಗಳ ಸಮೇತ ಆರ್ ಸಿ ಅವರಿಗೆ ನಾನು ಕೊಡುತ್ತಿದ್ದೇನೆ. ದಾಖಲೆಗಳಲ್ಲಿ ಎನ್ ಕ್ರೋಚ್ ಮೆಂಟ್ ಆಗಿದೆ ಎಂಬ ಮಾಹಿತಿ ಇದೆ. ಅದನ್ನು ತನಿಖೆ ಮಾಡಿ ಎನ್ ಕ್ರೋಚ್ ಮೆಂಟ್ ಆಗಿದೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರ್ವೇ ನಂಬರ್ 82ದಟ್ಟಗಳ್ಳಿ 160ಎಕ್ರೆ ಜಾಗ ಇವತ್ತಿನವರೆಗೂ ಸರ್ಕಾರಿ ಜಾಗ ಅಂತೇಳಿ 1921ರಿಂದ ದಾಖಲೆ ಇದೆ. ದಾನಪತ್ರದ ಮೂಲಕ ನಕಲಿ ದಾಖಲೆ ಸೃಷ್ಟಿ ಮಾಡುವುದರ ಮೂಲಕ ಸುಮಾರು ಐದು ಸೈಟ್ ಗಳನ್ನು ನಿವೇಶನವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಒಬ್ಬರು ತಾಯಮ್ಮ ಅನ್ನುವವರ ಹೆಸರಿಗೆ ಮತ್ತೆ ತಾಯಮ್ಮ ಅವರು ಶಶಾಂಕ್ ಅರಸ್ ಎಂಬವರ ಹೆಸರಿಗೆ ಪರಭಾರೆ ಮಾಡಿರುವಂತದ್ದು, ಅದಕ್ಕೆ ಸಂಬಂಧಿಸಿದ ಟೈಟಲ್ ಡೀಡ್ ಮತ್ತು ಸಂಬಂಧಿಸಿದ ದಾಖಲೆಗಳಿವೆ. ಇದಕ್ಕೆ ಸಂಬಂಧಿಸಿದ ಕಾರ್ಪೋರೇಶನ್ ದಾಖಲೆಗಳನ್ನು ಕೇಳಿದರೆ ದಾಖಲೆ ಇಲ್ಲ ಅಂತ ಹೇಳ್ತಾರೆ. ಸುಮಾರು ಅಲ್ಲಿ 80ಸಾವಿರ ಚದರ ಅಡಿಗಳನ್ನು ನಿವೇಶನವನ್ನಾಗಿ ಪರಿವರ್ತನೆ ಮಾಡಲಾಗಿದೆ. ಸೈಟ್ ಮೆಜರ್ ಮೆಂಟ್ 60*250, 70*300 ಈ ರೀತಿ ಅಳತೆಯ ಐದು ನಿವೇಶನಗಳು ಸುಮಾರು 19ಕೋಟಿ 57ಲಕ್ಷ ಮೌಲ್ಯದ ಆಸ್ತಿಯನ್ನು ಭೂಗಳ್ಳರು ಹೊಡೆದಿರುವುದು, ತಾಯಮ್ಮ ಅನ್ನೋರಾರು? ಶಶಾಂಕ್ ಅನ್ನೋರಾರು? ಆ ದಾಖಲೆಗಳು ಹೇಗೆ ಸೃಷ್ಟಿಯಾಯಿತು ಅನ್ನೋದರ ಬಗ್ಗೆ ತನಿಖೆಯಾಗಬೇಕು, ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ದಾಖಲೆ ಸಹಿತ ದೂರು ಕೊಡುತ್ತಿದ್ದೇನೆ. ಸಾ.ರಾ.ಮಹೇಶ್ ದಾಖಲೆ ನೀಡಿ ಸರ್ವೆ ಮಾಡಿಸುವಂತೆ ಪ್ರತಿಭಟನೆ ನಡೆಸಿಮನವಿ ನೀಡುತ್ತಾರೆ. ಎರಡು ದಿನ ಅವರಿಗೆ ನೀಡಿದ್ದಾರೆ. ನಾನು ಇಂದು ಮನವಿ ಕೊಡುತ್ತಿದ್ದೇನೆ. 21ನೇ ತಾರೀಖಿನೊಳಗಡೆ ಗಡುವು ಕೊಟ್ಟಿದ್ದೇನೆ. ಸರ್ವೆ ಮಾಡಿಸಿ ಕ್ರಮ ತೆಗೆದುಕೊಳ್ಳಬೇಕು. ಮುಡಾ ಆಯುಕ್ತರೂ ಕೂಡ ಬಹಳಷ್ಟು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಅಮಾನತು ಮಾಡಬೇಕು. ಯಾಕೆಂದರೆ ಮೂಡಾದಲ್ಲಿ ಆಸ್ತಿ ಸಂರಕ್ಷಣೆ ಮಾಡುವಲ್ಲಿ ಆಯುಕ್ತರು ವಿಫಲರಾಗಿದ್ದಾರೆ. ಅಮಾನತು ಮಾಡಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

See also  ಗೋವಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 2500 ರೂ. ಮಾಸಿಕ ಪಿಂಚಣಿ: ಅರವಿಂದ್ ಕೇಜ್ರಿವಾಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು