News Kannada
Sunday, December 04 2022

ದೇಶ-ವಿದೇಶ

ನಾಯಿ ಮರಿ ಕೊಡಿಸದ್ದಕ್ಕೆ ಬಾಲಕ ಆತ್ಮಹತ್ಯೆ

Photo Credit :

ನಾಯಿ ಮರಿ ಕೊಡಿಸದ್ದಕ್ಕೆ ಬಾಲಕ ಆತ್ಮಹತ್ಯೆ

ವಿಶಾಖಪಟ್ಟಣಂ: ನಾಯಿಮರಿ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ.. ಅದೇ ರೀತಿ ಆನ್​ಲೈನ್​ನಲ್ಲಿ ಚಂದದ ನಾಯಿಮರಿಯೊಂದನ್ನು ನೋಡಿ ಇಷ್ಟ ಪಟ್ಟ ಬಾಲಕನೊಬ್ಬ ಅದನ್ನು ತರಿಸಿಕೊಡು ಎಂದು ಅಮ್ಮನಿಗೆ ಹಠ ಹಿಡಿದು ಆಕೆ ಒಪ್ಪದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಷಣ್ಮುಖ ವಂಶಿ (16) ಆತ್ಮಹತ್ಯೆ ಮಾಡಿಕೊಂಡಿರು ಬಾಲಕ. ಈತನ ತಂದೆ ಆರು ವರ್ಷದ ಹಿಂದೆ ಸಾವನ್ನಪ್ಪಿದ್ದರು. ಷಣ್ಮುಖ ಅವರ ತಾಯಿ ಉಮಾ, ತನ್ನ ಗಂಡ ಸತ್ತ ನಂತರ ಮಗನೊಂದಿಗೆ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಷಣ್ಮುಖ ಆನ್​ಲೈನ್​ನಲ್ಲಿ 30 ಸಾವಿರ ರೂಪಾಯಿಯ ನಾಯಿ ಮರಿಯೊಂದನ್ನು ನೋಡಿದ್ದ. ಅದನ್ನು ಕೊಡಿಸೆಂದು ತಾಯಿ ಬಳಿ ಬೇಡಿಕೆ ಇಟ್ಟಿದ್ದ. ಈಗ ಬೇಡ, ಮುಂದೊಂದು ದಿನ ಕೊಡಿಸುತ್ತೇನೆಂದು ಸುಮ್ಮನಾಗಿಸಿದ್ದಳು.
ಕಳೆದ ವರ್ಷ ಉಮಾ ಅವರ ತಂದೆ, ಅಜ್ಜಿ ಹಾಗೂ ಚಿಕ್ಕಮ್ಮ ಕರೊನಾಗೆ ಬಲಿಯಾಗಿದ್ದರಂತೆ. ಅವರ ಮರಣ ಸರ್ಟಿಫಿಕೇಟ್​ನ್ನು ತರಲೆಂದು ಉಮಾ ಗಾಜುವಾಕಾಗೆ ಹೋಗಿದ್ದಳು. ಈ ರೀತಿ ಹೊರಗೆ ಹೋಗಿದ್ದೇನೆಂದು ಮಗನಿಗೆ ತಿಳಿಸಿ ಎಂದು ಪಕ್ಕದ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾಳೆ. ಷಣ್ಮುಖನಿಗೆ ವಿಚಾರ ತಿಳಿಸಲು ಪಕ್ಕದ ಮನೆಯವರು ಹೋದಾಗ ಮನೆ ಒಳಗಿನಿಂದ ಲಾಕ್​ ಆಗಿರುವುದು ಗೊತ್ತಾಗಿದೆ. ಎಷ್ಟೆಂದರೂ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದು, ಬಾಗಿಲು ಒಡೆದು ನೋಡಿದಾಗ ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪ್ರಕರಣ ದಾಖಲಾಗಿದೆ.

See also  ಫೆ.1ರಂದು ಕೇಂದ್ರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು