News Kannada
Friday, December 09 2022

ದೇಶ-ವಿದೇಶ

ರಾಂ ಮಂದಿರ ಟ್ರಸ್ಟ್‌ ಗೆ ಭೂ ಮಾರಾಟದಲ್ಲಿ ಅಕ್ರಮ ನಡೆದಿಲ್ಲ ಎಂದ ಮಾರಾಟಗಾರ

Photo Credit :

ರಾಂ ಮಂದಿರ ಟ್ರಸ್ಟ್‌ ಗೆ ಭೂ ಮಾರಾಟದಲ್ಲಿ  ಅಕ್ರಮ ನಡೆದಿಲ್ಲ ಎಂದ ಮಾರಾಟಗಾರ

ಲಖನೌ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಜತೆಗಿನ ಭೂಮಿ ವಹಿವಾಟಿನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಭ್ರಷ್ಟಾಚಾರದ ಆರೋಪ ಮಾಡಿದವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಟ್ರಸ್ಟ್​ಗೆ ಭೂಮಿ ಮಾರಾಟ ಮಾಡಿದವರ ಪೈಕಿ ಒಬ್ಬರಾದ ಸುಲ್ತಾನ್​ ಅನ್ಸಾರಿ ಮಂಗಳವಾರ ಸ್ಪಷ್ಟವಾಗಿ ಹೇಳಿದ್ದಾರೆ.
ಭೂಮಿ ಮಾರಾಟದ ಒಪ್ಪಂದವನ್ನು ಕಾನೂನು ಪ್ರಕಾರವೇ ಮಾಡಲಾಗಿದೆ. ಆರಂಭದ ಒಪ್ಪಂದ 2011ರಲ್ಲಿ ಮಾಡಲಾಗಿತ್ತು. ನಂತರ ಅದನ್ನು 2014 ಮತ್ತು 2019ರಲ್ಲಿ ನವೀಕರಿಸಲಾಗಿದೆ. ಕೊನೆಗೆ 2021ರಲ್ಲಿ ಮಾರಾಟ ಒಪ್ಪಂದವನ್ನು ದೃಢೀಕರಿಸಿ ಕೊನೆಗೊಳಿಸಲಾಗಿದೆ. ಜಮೀನನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂಬುದು ನಿಜ. ಆದರೆ, ಈ ಮಾರಾಟ ಒಪ್ಪಂದ ಹಿಂದೆಯೇ ಮಾಡಿರುವಂಥದ್ದು. ಅದೂ ಅಲ್ಲದೆ ಈ ಭೂಮಿ ರಾಮ ಮಂದಿರಕ್ಕೆ ಸಂಬಂಧಿಸಿದ್ದು ಎಂದು ಸುಲ್ತಾನ್​ ವಿವರಿಸಿದ್ದಾರೆ.
ಸಮಾಜವಾದಿ ಪಾರ್ಟಿ ನಾಯಕ ಪವನ್​ ಪಾಂಡೆ ಆರೋಪ ವಾಸ್ತವಕ್ಕೆ ದೂರವಾದುದು. ಅವರಿಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಹಿಂದೆ ನಾನು ಪಕ್ಷದಲ್ಲಿದ್ದೆ. ಈಗ ಯಾವುದೇ ಪಕ್ಷದ ಜತೆಗೂ ನಂಟಿಲ್ಲ ಎಂದು ಸುಲ್ತಾನ್​ ಹೇಳಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳು ಭೂಮಿಯನ್ನು 18.50 ಕೋಟಿ ರೂಪಾಯಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಖರೀದಿಸಿದೆ ಎಂದು ಎಸ್​ಪಿ ಮತ್ತು ಎಎಪಿ ನಾಯಕರು ಆರೋಪಿಸಿದ್ದರು. ಈ ಆರೋಪಕ್ಕೆ ದನಿಗೂಡಿಸಿದ ಕಾಂಗ್ರೆಸ್​ನ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ವಾದ್ರಾ, ರಣದೀಪ್​ ಸುರ್ಜೆವಾಲಾ, ರಾಜ್​ ಬಬ್ಬರ್​ ಇನ್ನಿತರರು, ಭಕ್ತರ ನಂಬಿಕೆಗೆ ವಂಚನೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು. ಟ್ರಸ್ಟ್​ನ ಲೆಕ್ಕಪತ್ರವನ್ನು ಸುಪ್ರೀಂಕೋರ್ಟ್​ ನಿಗಾದಲ್ಲಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಈ ಆರೋಪವನ್ನು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ ಸೋಮವಾರ ಅಲ್ಲಗಳೆದಿದ್ದು, ಭೂಮಿ ಖರೀದಿಯ ದಾಖಲೆಸಹಿತ ಸುದೀರ್ ಸ್ಪಷ್ಟನೆ ನೀಡಿದ್ದರು.
ಮಧ್ಯಪ್ರದೇಶದ ಕಾಂಗ್ರೆಸ್​ ನಾಯಕ ಕೆ.ಕೆ.ಮಿಶ್ರಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ವಿರುದ್ಧ ಇಂದೋರ್​ನಲ್ಲಿ ಛತ್ರಿಪುರ ಠಾಣೆಗೆ ದೂರು ನೀಡಿದ್ದು, ಎ್​ಐಆರ್​ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಟ್ರಸ್ಟ್​ನ ಪದಾಧಿಕಾರಿಗಳು 16 ಕೋಟಿ ರೂ.ಗಳ ಅವ್ಯವಹಾರ ಮಾಡಿ ವಂಚನೆ ಗೈದಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.

See also  ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು