News Kannada
Tuesday, December 06 2022

ದೇಶ-ವಿದೇಶ

ವಿನಾಕಾರಣ “ನಾಟ್ ಔಟ್” ಪ್ರತಿಭಟನೆ ಮಾಡಿದ್ರೆ ಕಾಂಗ್ರೆಸ್ “ವಾಷ್ ಔಟ್” ಖಚಿತ : ಕೊಡಗು ಬಿಜೆಪಿ ವ್ಯಂಗ್ಯ

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಮಡಿಕೇರಿ : ದೇಶ ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊಂಚ ಏರಿಕೆ ಮಾಡುವ ಮೂಲಕ ಬಂದ ಲಾಭದಿಂದ ಕೋವಿಡ್ ನಿರ್ವಹಣೆ ಹಾಗೂ ವ್ಯಾಕ್ಸಿನ್ ಗಾಗಿ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿದೆ. ಇದರ ಅರಿವು ದೇಶದ ಜನರಿಗಿದ್ದರೂ ವಿನಾಶದಂಚಿನಲ್ಲಿರುವ ಕಾಂಗ್ರೆಸ್ ಬೆಲೆ ಏರಿಕೆಯಾಗಿದೆ ಎಂದು ಪ್ರತಿಬಿಂಬಿಸಿ “100 ನಾಟ್ ಔಟ್” ಘೋಷಣೆಯೊಂದಿಗೆ ನಡೆಸುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಪ್ರಸ್ತುತ ಇಂಧನ ಬೆಲೆ ಹೊರೆಯಂತೆ ಕಂಡು ಬಂದರೂ ಕೋವಿಡ್ ಸಂಕಷ್ಟದ ದಿನಗಳಲ್ಲಿ ಕೇಂದ್ರ ಸರ್ಕಾರ ದೇಶದ ಜನರ ಆರೋಗ್ಯವನ್ನು ಕಾಪಾಡಲು ಮತ್ತು ಲಾಕ್‌ಡೌನ್ ಪರಿಹಾರ ನೀಡಲು ತೆಗೆದುಕೊಂಡಿರುವ ದಿಟ್ಟ ಕ್ರಮಗಳ ಬಗ್ಗೆ ದೇಶದ ಜನರಿಗೆ ತೃಪ್ತಿ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ. ತೈಲೋತ್ಪನ್ನಗಳ ವ್ಯವಹಾರದಿಂದ ಬಂದ ಲಾಭದಲ್ಲಿ ಸುಮಾರು 35 ಸಾವಿರ ಕೋಟಿ ರೂ.ಗಳನ್ನು ಕೋವಿಡ್ ವ್ಯಾಕ್ಸಿನ್ ನೀಡಲು ಮತ್ತು ಹಲವು ಜನಪರ ಯೋಜನೆಗಳಿಗೆ ಮೀಸಲಿಡಲಾಗಿದೆ. ಇದು ಜನರಿಗೆ ಅರ್ಥವಾಗಿದೆ, ಆದರೆ ಎಲ್ಲೂ ಅಧಿಕಾರವಿಲ್ಲದೆ ಹತಾಶ ಮನೋಭಾವದಲ್ಲಿರುವ ಕಾಂಗ್ರೆಸ್ ಜನರ ಹಾದಿ ತಪ್ಪಿಸುವ ಯತ್ನದಲ್ಲಿ ತೊಡಗಿದೆ. ಈ ರೀತಿಯ ಅರ್ಥಹೀನ “ನಾಟ್‌ಔಟ್” ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದರೆ ಮುಂದೊoದು ದಿನ ದೇಶದಿಂದ “ಕಾಂಗ್ರೆಸ್ ವಾಷ್‌ಔಟ್” ಆಗುವುದರಲ್ಲಿ ಸಂಶಯವಿಲ್ಲವೆoದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಎನ್‌ಡಿಎ ಸರ್ಕಾರ ಆಡಳಿತ ನಡೆಸುತಿದ್ದ ಅವಧಿಯಲ್ಲಿ ಇಂಧನದ ಬೆಲೆ ಕೇವಲ ರೂ.46 ರ ಆಸುಪಾಸಿನಲ್ಲಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಅಡುಗೆ ಅನಿಲದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದನ್ನು ಇಡೀ ದೇಶದ ಜನ ಗಮನಿಸಿದ್ದಾರೆ.
ಈಗಿನ ಎನ್‌ಡಿಎ ಸರ್ಕಾರ ಪರಿಸ್ಥಿತಿಗನುಗುಣವಾಗಿ ಅಲ್ಪಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿದೆಯೇ ಹೊರತು ಯುಪಿಎ ಸರ್ಕಾರದಂತೆ ಜನರಿಗೆ ಹೊರೆಯಾಗುವ ರೀತಿಯಲ್ಲಿ ತೈಲೋತ್ಪನ್ನಗಳ ದರವನ್ನು ದುಬಾರಿ ಮಾಡಿಲ್ಲ. ಕೇಂದ್ರದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿರುವಂತೆ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ಈ ಹಿಂದೆ ಯುಪಿಎ ಸರ್ಕಾರ ನೀಡಿದ್ದ ಆಯಿಲ್ ಬಾಂಡ್‌ಗೆ ಕೋವಿಡ್ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಸುಮಾರು 2 ಲಕ್ಷ ಕೋಟಿ ರೂ. ಗಳಿಗೂ ಅಧಿಕ ಬಡ್ಡಿ ನೀಡಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದÀಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಆರ್ಟಿಕಲ್ 370 ಯನ್ನು ಮರು ಸ್ಥಾಪನೆ ಮಾಡುವುದಾಗಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಅವರು ಹೇಳಿಕೆ ನೀಡಿರುವುದನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿರುವ ಮಹೇಶ್ ಜೈನಿ, ಪಾಕಿಸ್ತಾನ, ಉಗ್ರರು ಮತ್ತು ಸಮಾಜಘಾತುಕ ಶಕ್ತಿಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.
ದಿಗ್ವಿಜಯ ಸಿಂಗ್ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ನೀಡಬೇಕೆಂದು ತಿಳಿಸಿರುವ ಅವರು, ಕೇವಲ 1 ವರ್ಗದ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಗೆ ಸವಾಲಾಗಿರುವ ಈ ರೀತಿಯ ನಾಯಕರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ಎನ್‌ಡಿಎ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನತೆಗೆ ಶಾಪವಾಗಿದ್ದ ಹಾಗೂ ದೇಶದ್ರೋಹಿಗಳಿಗೆ ವರವಾಗಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸಿತು. ಕಣಿವೆ ರಾಜ್ಯದಲ್ಲಿ ಈ ಕಾಯ್ದೆಯನ್ನು ಬಳಸಿಕೊಂಡು ಉಗ್ರವಾದಿಗಳು ಹಾಗೂ ಪಾಕಿಸ್ತಾನವನ್ನು ಬೆಂಬಲಿಸಿ ಈ ದೇಶದಲ್ಲಿ ಕಪಟ ರಾಜಕೀಯ ಮಾಡುತ್ತಿದ್ದ ಹಲವು ದೇಶದ್ರೋಹಿ ರಾಜಕಾರಣಿಗಳ ಪಾಲಿಗೆ ಕೆಲಸವಿಲ್ಲದಂತೆ ಮಾಡಲಾಗಿದೆ.
ಸದಾ ಬಾಂಬ್ ಮತ್ತು ಬಂದೂಕುಗಳ ನಡುವೆ ಜೀವನ ಸಾಗಿಸುತ್ತಿದ್ದ ಅಲ್ಲಿನ ಜನರಲ್ಲಿ ಧೈರ್ಯ ತುಂಬಿ ಯಾವುದೇ ಆತಂಕವಿಲ್ಲದೆ ಬದುಕು ಸಾಗಿಸುವಂತೆ ಹಾಗೂ ಚುನಾವಣೆಗಳಲ್ಲೂ ಪಾಲ್ಗೊಳ್ಳುವಂತೆ ಕಾನೂನು ಬದಲಾವಣೆ ಮಾಡಲಾಗಿದ್ದು, ಇದು ಎನ್‌ಡಿಎ ಸರ್ಕಾರದ ಹೆಗ್ಗಳಿಕೆಯಾಗಿದೆ. ನಮ್ಮ ದೇಶ ಮತ್ತು ವಿದೇಶಗಳಲ್ಲೂ ಕೋಟ್ಯಾಂತರ ಜನರಿಂದ ಪ್ರಶಂಸೆಗೆ ಒಳಗಾಗಿರುವ ಪ್ರಧಾನಿ ನರೇಂದ್ರಮೋದಿ ಅವರನ್ನು ಬೇರೆ ಯಾವುದೇ ರೀತಿಯಿಂದ ಮಣಿಸಲಾಗದ ಕಾಂಗ್ರೆಸ್ ಕುಂಟು ನೆಪಗಳನ್ನು ಮುಂದಿಟ್ಟು ನಗೆಪಾಟಲಿಗೀಡಾಗುತ್ತಿದೆ ಎಂದು ಮಹೇಶ್ ಜೈನಿ ಟೀಕಿಸಿದ್ದಾರೆ.

See also  ಕೊರೊನಾದಿಂದ ಮೃತರಾದ ಶಿಕ್ಷಕರಿಗೆ ₹50 ಲಕ್ಷ ಪರಿಹಾರ ನೀಡಿ- ಎಚ್‌ಡಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು