News Kannada
Friday, December 02 2022

ದೇಶ-ವಿದೇಶ

ಅಶ್ಲೀಲ ಪದ ಬಳಕೆ; ಯೂಟ್ಯೂಬರ್ ದಂಪತಿಗಳ ಬಂಧನ

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಭಾರತದಲ್ಲಿ ರದ್ದಾಗಿರುವ ಪಬ್‍ಜಿ ಅನ್ನು ಲೈವ್‍ಸ್ಟ್ರೀಮಿಂಗ್ ಮಾಡಿದ ಆರೋಪದ ಮೇಲೆ ಚೆನ್ನೈ ಮೂಲದ ಯೂಟ್ಯೂಬರ್ ಅನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಲ್ಲದೇ, ಇದೇ ವೇಳೆ ಮಹಿಳೆರ ಬಗ್ಗೆ ಅವಾಚ್ಯ ಹಾಗೂ ಅಶ್ಲೀಲ ಪದ ಬಳಕೆ ಮಾಡಿದ ಆರೋಪವನ್ನು ಕೂಡ ಎದುರಿಸುತ್ತಿದ್ದಾರೆ. ಈ ಪ್ರಕರಣದ ಆರೋಪಿಯನ್ನು ಯೂಟ್ಯೂಬರ್ ಮದನ್ ಎಂದು ತಿಳಿದು ಬಂದಿದ್ದು, ಇವರನ್ನು ಚೆನ್ನೈನಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಯೂಟ್ಯೂಬ್ ಚಾನಲ್‍ನ ಆಡಳಿತಾಧಿಕಾರಿಯಾದ ಮದನ್ ಅವರ ಪತ್ನಿಯಾದ ಕೃತಿಕಾ ಅವರನ್ನು ಬಂಧಿಸಲಾಗಿದೆ.
ಇವರ ಯೂಟ್ಯೂಬ್ ಚಾನಲ್‍ಗೆ 2 ಲಕ್ಷಕ್ಕೂ ಹೆಚ್ಚು ಮಂದಿ ಚಂದದಾರರಿದ್ದಾರೆ. ಹೆಚ್ಚಿನವರು ಅಪ್ರಾಪ್ತ ವಯಸ್ಸಿನವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ದಂಪತಿ ಮದನ್, ಟಾಕ್ಸಿಕ್ ಮದನ್ 18+, ಪಬ್‍ಜಿ ಮದನ್ ಗರ್ಲ್ ಫ್ಯಾನ್, ರಿಚಿ ಗೇಮಿಂಗ್ ವೈಟಿ ಎಂಬ ಯೂಟ್ಯೂಬ್ ಚಾನಲ್ ಅನ್ನು ನಡೆಸುತ್ತಿದ್ದಾರೆ. ಇದರಲ್ಲಿ “MADAN angry at his girlfriend | Strictly 18+|Tamil| PUBGM| Richie GamiNg” ಎಂಬ ಯೂಟ್ಯೂಬ್ ಚಾನಲ್ ಮೇಲೆ ದೂರು ನೀಡಲಾಗಿದೆ. ಇದರಲ್ಲಿ ಮಹಿಳೆಯರ ಖಾಸಗಿ ಬದುಕು ಮತ್ತು ಮಹಿಳೆಯರ ಘನತೆ ಹಾಗೂ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಹ ಅಂಶಗಳಿವೆ. ಇದು ಮಕ್ಕಳಲ್ಲಿ ವಿಕೃತ ಮನೋಭಾವ ಬೆಳೆಸುವಂತಹ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಚಾನಲ್‍ಗೆ ಸಾಕಷ್ಟು ಮಂದಿ ಅಪ್ರಾಪ್ತರೇ ಚಂದದಾರರು ಇರುವುದರಿಂದ ಈ ಚಾನಲ್ ಮೇಲೆ ನಿಷೇಧ ಹೇರಬೇಕು ಹಾಗೂ ಚಾನಲ್ ನಡೆಸುತ್ತಿರುವ ಮದನ್ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೇ ಈ ಘಟನೆ ಸಾಮಾಜಿಕ ಜಾಲತಾಣ ಬಳಕೆದಾರರ ಆಕ್ರೋಶಕ್ಕೂ ಕಾರಣವಾಗಿದೆ. ಸಲ್ಲಿಕೆಯಾದ ಜಾಮೀನು ಅರ್ಜಿಯನ್ನು ಗುರುವಾರ ಪರಿಶೀಲಿಸುವಾಗ, ಮದ್ರಾಸ್ ಹೈಕೋರ್ಟ್ ರೆಕಾರ್ಡ್ ಮಾಡಿದ ಸಂಭಾಷಣೆಗಳನ್ನು ಕೇಳಿದ್ದು, ಇದು ಆಘಾತ ಉಂಟು ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ. ಆದಾಗ್ಯೂ, ಈ ಪ್ರಕರಣವು ಕಾನೂನು ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಈ ಅಶ್ಲೀಲತೆಯ ಬಗ್ಗೆ ಯಾರು ದೂರು ನೀಡಿದ್ದಾರೆ ಎಂಬ ಬಗ್ಗೆ ಸರಿಯಾಗಿ ಮಾಹಿತಿ ತಿಳಿದು ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದ ಬಳಕೆ ಮಾಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಪಬ್‍ಜಿ ಅಥವಾ ಇತರೆ ಯಾವ ಆಟದಿಂದ ನಿಯಮ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಎನ್‍ಡಿಟಿವಿಗೆ ಮಾಹಿತಿ ನೀಡಿದ್ದಾರೆ. ಯೂಟ್ಯೂಬ್ ಚಾನಲ್ ಮದನ್ ಹಾಗೂ ಆತನ ಪತ್ನಿ ಕೃತಿಕಾ ಅವರ ಬದುಕಿನ ಆದಾಯದ ಮೂಲ. ಇವರು ಈ ಯೂಟ್ಯೂಬ್ ಚಾನಲ್‍ನಿಂದ ತಿಂಗಳಿಗೆ ಸರಿಸುಮಾರು ಮೂರು ಲಕ್ಷ ಹಣ ಸಂಪಾದನೆ ಮಾಡುತ್ತಾರೆ. ಇವರ ಬಳಿ ಆಡಿ ಸೇರಿದಂತೆ ಮೂರು ಐಶರಾಮಿ ಕಾರುಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

See also  ಕದನ ವಿರಾಮ ಉಲ್ಲಂಘಿಸಿದ ಪಾಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು