News Kannada
Wednesday, December 07 2022

ದೇಶ-ವಿದೇಶ

ವಾಹನ ಸಂಚಾರಕ್ಕೆ ಮರದ ದಿಮ್ಮಿಗಳ ಅಡಚಣೆ ; ಗ್ರಾಮಸ್ಥರಿಂದ ತೆರವು

Photo Credit :

‘ಡಾರ್ಲಿಂಗ್ಸ್’ ಚಿತ್ರದ ಸಿದ್ಧತೆಯಲ್ಲಿ ನಟಿ ಆಲಿಯಾ ಭಟ್

ಧಾರವಾಡ: ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಂಬಾರಗಣವಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಮೇಲ್ಭಾಗದಲ್ಲಿ ಮರದ ದಿಮ್ಮಿ ಗಳು ಸಾಕಷ್ಟು ಬಂದು ನಿಂತುಕೊಂಡಿದೆ. ಇದರಿಂದ ಗ್ರಾಮಸ್ಥರು ತೊಂದರೆಗೊಳಗಾಗಿದ್ದಾರೆ.
ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಈ ರಸ್ತೆ ಅರಣ್ಯದ ಮಧ್ಯದಲ್ಲಿದ್ದು, ಈ ರಸ್ತೆ ಗ್ರಾಮಕ್ಕೆ ಹೋಗಲು ಇರುವಂತಹ ಒಂದೇ ಒಂದು ರಸ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇದೀಗ ರಸ್ತೆ ಮಧ್ಯದ ಹಳ್ಳದ ಸೇತುವೆ ಮುಳುಗಡೆಗೊಂಡಿದೆ. ಇದರಿಂದ ಗ್ರಾಮಸ್ಥರು ಯಾರೂ ಹೊರಗೆ ಬರದಂತಾಗಿದೆ. ಹಳ್ಳದ ನೀರಿನೊಂದಿಗೆ ದೊಡ್ಡ ದೊಡ್ಡ ಮರದ ದಿಮ್ಮಿ  ತೇಲಿ ಬಂದಿವೆ. ಹೀಗಾಗಿ ಸೇತುವೆ ಮೇಲೆ ನೀರು ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಹಣ ಸಂಗ್ರಹಿಸಿ ದಿನ್ನೆ ತೆರವುಗೊಳಿಸಿದ್ದಾರೆ. ಅಲ್ಲದೆ ಸಾಕಷ್ಟು ಮಣ್ಣ ಕೂಡ ಸೇತುವೆ ಮೇಲೆ ನಿಂತಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅರಣ್ಯದಿಂದ ನೀರು ಇಲ್ಲಿಗೆ ಹರಿದು ಬರುತಿದ್ದು, ಜನರು ಟ್ರ್ಯಾಕ್ಟರ್ ಮೂಲಕ ಸೇತುವೆ ದಾಟುವಂತ ಪರಿಸ್ಥಿತಿ ಬಂದಿದೆ.

See also  ತಾಯ್ನಾಡಿಗೆ ಮರಳಿದ್ದಾರೆ ಉಕ್ರೇನ್‌ನಲ್ಲಿ ಸಿಲುಕಿದ್ದ 2100 ಕ್ಕೂ ಹೆಚ್ಚು ಭಾರತೀಯರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು