NewsKarnataka
Wednesday, October 06 2021

ದೇಶ-ವಿದೇಶ

ಗಾಲ್ವಾನ್‌ ಕಣಿವೆಯಲ್ಲಿ ಬೀಡು ಬಿಟ್ಟ 2 ಲಕ್ಷ ಯೋಧರು: ಚೀನಾಕ್ಕೆ ಎಚ್ಚರಿಕೆ ಗಂಟೆ

ನವದೆಹಲಿ: ಭಾರತ ಮತ್ತು ಚೀನಾದ ನಡುವೆ ಇನ್ನೂ ಉದ್ವಿಗ್ನ ವಾತಾವರಣ ಮುಂದುವರೆದೇ ಇದೆ. ಈ ಎರಡು ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಿನ ದ್ವೇಷದ ಜ್ವಾಲೆ ಇನ್ನೂ ಉರಿಯುತ್ತಿರುವ ನಡುವೆಯೇ, ಚೀನಾಕ್ಕೆ ತಕ್ಕ ಬುದ್ಧಿ ಕಲಿಸಲು ಭಾರತ ಇನ್ನೂ 50 ಸಾವಿರ ಹೆಚ್ಚುವರಿ ಯೋಧರನ್ನು ಗಡಿಯತ್ತ ನಿಯೋಜನೆ ಮಾಡಿದೆ.
ಈ ಮೊದಲು ಗಾಲ್ವಾನ್ ಗಡಿಯಲ್ಲಿ ಒಂದೂವರೆ ಲಕ್ಷದಷ್ಟು ಯೋಧರಿದ್ದು, ಇದೀಗ ಸಂಖ್ಯೆ 2 ಲಕ್ಷಕ್ಕೆ ಏರಿದೆ. ಈ ಮೂಲಕ ಭಾರತವು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಯೋಧರ ಸಂಖ್ಯೆ ಹೆಚ್ಚಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಕಳೆದ ವರ್ಷ ಪೂರ್ವ ಲಡಾಖ್‌ನಲ್ಲಿ ಈ ಎರಡು ದೇಶಗಳ ನಡುವೆ ಭಾರಿ ಬಿಕ್ಕಟ್ಟು ತಲೆದೋರಿತ್ತು. ಜತೆಗೆ ಇನ್ನೊಂದೆಡೆ ಪಾಕಿಸ್ತಾನದ ಕಾಟ. ಈ ದೇಶಗಳಿಗೆ ಪಾಠ ಕಲಿಸಲು ಇದಾಗಲೇ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಸಂಭವನೀಯ ಯುದ್ಧಕ್ಕೆ ಸಿದ್ಧರಾಗಿರುವಂತೆ ಸಶಸ್ತ್ರ ಪಡೆಗಳಿಗೆ ಸೂಚಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!