NewsKarnataka
Monday, January 24 2022

ದೇಶ-ವಿದೇಶ

ಸೂಪ್‌ ತಯಾರಿಸುವಾಗ ಬಾಣಲೆಗೆ ಬಿದ್ದು ಮೃತನಾದ ಬಾಣಸಿಗ

ಇರಾಕ್: ಔತಣಕೂಟವೊಂದರಲ್ಲಿ ಚಿಕನ್‌ ಸೂಪ್‌ ತಯಾರು ಮಾಡುತ್ತಿರುವ ಸಂದರ್ಭದಲ್ಲಿ ಬಾಣಲೆಗೆ ಬಿದ್ದು ಪ್ರಸಿದ್ಧ ಬಾಣಸಿಗನೊಬ್ಬ ಬೆಂದುಹೋಗಿರುವ ಭಯಾನಕ ಘಟನೆ ಇರಾಕ್‌ನಲ್ಲಿ ನಡೆದಿದೆ.

ಜಾಕೋ ಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ ಈ ದುರಂತ ನಡೆದಿದೆ. ಅದ್ಧೂರಿ ಮದುವೆ ಸಮಾರಂಭ ಇದಾಗಿತ್ತು. ಈ ಸಮಾರಂಭದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಬಾಣಸಿಗರ ಬೃಹತ್‌ ಗುಂಪು ವಿವಿಧ ಖಾದ್ಯಗಳನ್ನು ತಯಾರಿಸುತ್ತಿತ್ತು. ಆ ಸಮಯದಲ್ಲಿ ಬಾಣಸಿಗನೊಬ್ಬ ಚಿಕನ್‌ ಸೂಪ್‌ ತಯಾರಿಸುತ್ತಿದ್ದ. ಊಟ ಬಡಿಸಲು ಎಲ್ಲಾ ಸಿದ್ಧತೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಬಾಣಸಿಗ ಇದ್ದಕ್ಕಿದ್ದಂತೆಯೇ ಕಾಲುಜಾರಿ ಬಾಣಲೆಯಲ್ಲಿ ಬಿದ್ದುಬಿಟ್ಟಿದ್ದಾನೆ. ಬಾಣಲೆ ಎಷ್ಟು ಬಿಸಿಯಾಗಿತ್ತು ಎಂದರೆ ಅದರಲ್ಲಿಯೇ ಬೆಂದುಹೋಗಿದ್ದಾನೆ, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿ ಉಳಿಯಲಿಲ್ಲ. ಈ ದುರ್ದೈವಿ ಹೆಸರು ಇಸ್ಸಾ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ. 25 ವರ್ಷಗಳಿಂದ ಇದೇ ವೃತ್ತಿಯಲ್ಲಿ ಇರುವ ಇಸ್ಮಾಯಿಲ್‌ ಈ ಪ್ರದೇಶದಲ್ಲಿ ಭಾರಿ ಖ್ಯಾತಿ ಗಳಿಸಿದವ. ಮೂರು ಮಕ್ಕಳನ್ನು ಬಿಟ್ಟು ಬಾಣಸಿಗ ಮೃತಪಟ್ಟಿರುವುದಾಗಿ ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145
Subscribe to our Brand New YouTube Channel

Subscribe Newsletter

Get latest news karnataka updates on your email.