NewsKarnataka
Friday, January 28 2022

ದೇಶ-ವಿದೇಶ

ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ

ಮುಂಬೈ : ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಂದಾಗಬಹುದೆಂಬ ಊಹೆಗಳು ಹೆಚ್ಚುತ್ತಿರುವಂತೆಯೇ, ಶಿವಸೇನೆ ನಾಯಕ ಸಂಜಯ ರಾವತ್​ ಎರಡೂ ಪಕ್ಷಗಳ ಬಂಧ ಚೆನ್ನಾಗೇ ಇದೆ ಎಂದಿದ್ದಾರೆ. ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ, ಭಾರತ-ಪಾಕ್​ನಂತಲ್ಲ ಎಂದಿದ್ದಾರೆ!
ಇತ್ತೀಚೆಗೆ ಡೈವೋರ್ಸ್ ಪಡೆಯುವ ನಿರ್ಧಾರ ತಿಳಿಸಿದ್ದ ಆಮೀರ್​ ಖಾನ್ ಕಿರಣ್​ ರಾವ್ ದಂಪತಿ, ತಮ್ಮ ಸಂಬಂಧ ಬದಲಾದರೂ, ನಾವು ಒಂದು ಕುಟುಂಬವೇ ಆಗಿರುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ರಾವತ್​ ಅವರು ಉಪಮೆ ನೀಡಿದ್ದಾರೆ. “ನಾವು (ಶಿವಸೇನೆ, ಬಿಜೆಪಿ) ಭಾರತ-ಪಾಕಿಸ್ತಾನ ಅಲ್ಲ. ಆಮೀರ್​ ಖಾನ್​ ಮತ್ತು ಕಿರಣ್​ ರಾವ್​ರನ್ನು ನೋಡಿ, ಇದು ಅವರ ತರಹ. ನಮ್ಮ ರಾಜಕೀಯ ಮಾರ್ಗಗಳು ಬೇರೆಯಾಗಿವೆ, ಆದರೆ, ನಮ್ಮ ಸ್ನೇಹ ಹಾಗೇ ಉಳಿಯುತ್ತದೆ” ಎಂದು ರಾವತ್​ ಹೇಳಿರುವುದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರು ಈ ಮುನ್ನ ತಮ್ಮ ಪಕ್ಷಗಳು ಶತೃಗಳಲ್ಲ ಎಂದಿದ್ದಕ್ಕೆ ರಾವತ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್​ಸಿಪಿ-ಕಾಂಗ್ರೆಸ್​ ಒಕ್ಕೂಟ ಮುರಿದುಬೀಳುತ್ತಿಲ್ಲ ಎಂದಿರುವ ಶಿವಸೇನೆ ಸಂಸದ ರಾವತ್​, ಸರ್ಕಾರ ಪೂರ್ಣ ಅವಧಿಯವರೆಗೆ ನಡೆಯುವುದು ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.