NewsKarnataka
Sunday, September 26 2021

ದೇಶ-ವಿದೇಶ

ನಕಲಿ ಕಾಲ್‌ ಸೆಂಟರ್‌ ತೆರೆದು ಅಮೇರಿಕ ನಾಗರಿಕರಿಗೆ ವಂಚಿಸುತಿದ್ದ 65 ಜನರ ಬಂಧನ

 

ನವದೆಹಲಿ : ನಕಲಿ ಕಾಲ್​ ಸೆಂಟರ್​ ಒಂದನ್ನು ತೆರೆದು ಅಮೇರಿಕನ್‌ ನಾಗರಿಕರಿಗೆ ವಂಚಿಸುತಿದ್ದ ತಂಡವೊಂದನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ನಕಲಿ ಕಾಲ್‌ ಸೆಂಟರ್ನಲ್ಲಿ ಅಮೇರಿಕದ ಅಧಿಕಾರಿಗಳ ರೀತಿಯಲ್ಲಿ ಅಲ್ಲಿನ ನಾಗರಿಕರಿಗೆ ಬೆದರಿಕೆ ಒಡ್ಡಿ ಹಣ ಪಡೆಯಲಾಗುತಿತ್ತು. ಕಾಲ್‌ ಸೆಂಟರ್‌ ನ ಇಬ್ಬರು ಮಾಲೀಕರು ಸೇರಿದಂತೆ ಅಲ್ಲಿ ಕೆಲಸ ಮಾಡುತ್ತಿದ್ದ 65 ಜನರನ್ನು ಬಂಧಿಸಲಾಗಿದೆ. ಪಶ್ಚಿಮ ದೆಹಲಿಯ ಹರಿನಗರದಲ್ಲಿ ಈ ನಕಲಿ ಕಾಲ್​ ಸೆಂಟರ್​ ಪತ್ತೆಯಾಗಿದೆ.
ಆರೋಪಿಗಳು ಅಮೆರಿಕದ ನಾಗರಿಕರ ವಿವರಗಳನ್ನು ಅಕ್ರಮ ವಿಧಾನಗಳಿಂದ ಸಂಗ್ರಹಿಸುತ್ತಿದ್ದರು. ಅಮೆರಿಕದ ಸರ್ಕಾರಿ ಸಂಸ್ಥೆಗಳಾದ ಎಫ್​ಬಿಐ, ಟ್ರೆಷರಿ ಡಿಪಾರ್ಟ್​ಮೆಂಟ್​, ಡ್ರಗ್ ಎನ್​ಫೋರ್ಸ್​ಮೆಂಟ್ ಏಜೆನ್ಸಿಗಳ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡಿ ಅವರ ಸೋಷಿಯಲ್ ಸೆಕ್ಯುರಿಟಿ ನಂಬರ್​ಅನ್ನು ಸಸ್ಪೆಂಡ್​ ಮಾಡುವುದಾಗಿ ಹೆದರಿಸುತ್ತಿದ್ದರು. ನಂತರ ನಿರ್ದಿಷ್ಟ ಮೊತ್ತದ ಹಣವನ್ನು ಈ-ಗಿಫ್ಟ್​ ಕಾರ್ಡ್​ಗಳ ರೂಪದಲ್ಲಿ ವರ್ಗಾಯಿಸುವಂತೆ ಹೇಳಿ ವಂಚಿಸುತ್ತಿದ್ದರು ಎನ್ನಲಾಗಿದೆ.
ಈ ಸೆಂಟರನ್ನು ನಡೆಸುತ್ತಿದ್ದ ಮುಖ್ಯ ಆರೋಪಿಗಳನ್ನು ಲಖನ್ ಜಗವಾನಿ ಮತ್ತು ವಿಜೇಂದರ್ ಸಿಂಗ್ ರಾವತ್ ಎಂದು ಗುರುತಿಸಲಾಗಿದೆ. ಕಾನೂನುಬಾಹಿರವಾದ ವಿಒಐಪಿ ಕಾಲಿಂಗ್ ಮತ್ತು ಕಾಲರ್ ಐಡಿ ಸ್ಪೂಫಿಂಗ್ ವಿಧಾನವನ್ನು ಬಳಸಿ ಈ ದಂಧೆ ನಡೆಸುತ್ತಿದ್ದರು. ಇವರು ವಂಚನೆ ಮಾಡಿ ಲಪಟಾಯಿಸಿರುವ ಹಣದ ಮೊತ್ತವು ಕೋಟಿಗಳಲ್ಲಿದೆ ಎಂದು ಡಿಸಿಪಿ ಊರ್ವಿಜಾ ಗೋಯಲ್ ಹೇಳಿದ್ದಾರೆ. ಅಮೇರಿಕದ ಸರ್ಕಾರಿ ಅಧಿಕಾರಿಗಳಿಂದ ಈ ಮಾಹಿತಿ ತಿಳಿದ ಕೂಡಲೇ ಕಾಲ್‌ ಸೆಂಟರ್‌ ಮೇಲೆ ಧಾಳಿ ನಡೆಸಲಾಯಿತು ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!