News Kannada
Monday, November 28 2022

ದೇಶ-ವಿದೇಶ

ವಿಮಾನದ ರೆಕ್ಕೆಯಲ್ಲಿ ಕುಳಿತು ದೇಶ ಬಿಡಲು ಹೋದವರ ಕಥೆ ಏನಾಯ್ತು ಗೊತ್ತಾ ? - 1 min read

Photo Credit :

ಕಾಬೂಲ್ ; ತಾಲಿಬಾನಿಗಳು ಅಪ್ಘಾನಿಸ್ಥಾನದ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ತಾಲಿಬಾನಿಗಳಿಗೆ ಹೆದರಿರುವ ಆಫ್ಘನ್​ ಜನ ದೇಶದಿಂದ ಪಲಾಯನ ಮಾಡಲು ಮುಂದಾಗಿ ಅಮೆರಿಕದ ವಿಮಾನ ಹತ್ತಿ ಪರಾರಿಯಾಗಲು ಯತ್ನಿಸಿದ್ದ ಹಾಗೂ ಆ ವಿಮಾನದ ಲ್ಯಾಂಡಿಂಗ್​ ವ್ಹೀಲ್​ನಲ್ಲಿ ಕುಳಿತು ಪ್ರಯಾಣಿ ಸುವಾಗ ಸಂದರ್ಭದಲ್ಲಿ ಟೇಕಾಫ್​ ವೇಳೆ ಮೇಲಿಂದ ಇಬ್ಬರು ಕೆಳಗೆ ಬಿದ್ದ ದೃಶ್ಯಗ ಳು ವಿಶ್ವದಾದ್ಯಂತ ವೈರಲ್ ಆಗಿತ್ತು. ಇದೀಗ ವಿಮಾನದಿಂದ ಕೆಳಕ್ಕೆ ಬಿದ್ದು ಮೃತಪಟ್ಟವರ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ.
ವಿಮಾನದಿಂದ ಕೆಳಗೆ ಬಿದ್ದವರ ಮೃತದೇಹ 49 ವರ್ಷದ ಸೆಕ್ಯುರಿಟಿ ಗಾರ್ಡ್ ವಾಲಿ ಸಾಲೆಕ್ ಒಡೆತನದ ಮನೆಯ ಮೇಲ್ಛಾವಣಿಯ ಮೇಲೆ ಬಿದ್ದು, ತಲೆ ಮತ್ತು ದೇಹದ ಇತರೆ ಭಾಗಗಳು ಛಿದ್ರಗೊಂಡಿವೆ ಎಂದು ಎನ್​ಡಿವಿ ವರದಿ ಮಾಡಿದೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಲೆಕ್, “ಘಟನೆ ವೇಳೆ ನಾನು ನನ್ನ ಕುಟುಂಬದವರ ಜೊತೆಗೆ ಮನೆಯಲ್ಲೇ ಇದ್ದೆ. ಇದ್ದಕ್ಕಿದ್ದಂತೆ ಮನೆಯ ಛಾವಣಿಯಿಂದ ಜೋರಾಗಿ ಥಡ್ ಎಂಬ ಶಬ್ಧ ಕೇಳಿ ಬಂದಿತ್ತು. ಆ ಶಬ್ಧ ಟ್ರಕ್ ಟೈರ್ ಛಿದ್ರವಾದಂತೆಯೇ ಇತ್ತು. ಆದರೆ ನಾನು ಮನೆಯ ಮೇಲ್ಛಾವಣಿಗೆ ಆಗಮಿಸಿ ನೋಡಿದಾಗ ಆ ದೃಶ್ಯವನ್ನು ಕಂಡು ಸಂಪೂರ್ಣವಾಗಿ ಆಘಾತಗೊಂಡೆ. ಮನೆಯ ಮೇಲೆ ಬಿದ್ದು ಇಬ್ಬರ ದೇಹವೂ ಛಿದ್ರವಾಗಿತ್ತು. ಈ ಭಯಾನಕ ದೃಶ್ಯವನ್ನು ಕಂಡು ನನ್ನ ಪತ್ನಿ ಮೂರ್ಛೆ ಹೋದಳು” ಎಂದು ಆತ ವಿವರಿಸಿದ್ದಾನೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಯುಎಸ್ ವಿಮಾನದಿಂದ ಕೆಳಗೆ ಬಿದ್ದ ವ್ಯಕ್ತಿಗಳು ತಾಲಿಬಾನ್ ಸೇನೆ ಅಫ್ಘಾನನ್ನು ನಿಯಂತ್ರಣವನ್ನು ವಶಪಡಿಸಿಕೊಂಡ ಒಂದು ದಿನದ ನಂತರ ರಾಜಧಾನಿ ಕಾಬೂಲ್​ನಿಂದ ಪಲಾಯನ ಮಾಡಲು ಸಾವಿರಾರು ಜನರ ಜೊತೆಗೆ ಇವರೂ ಸಹ ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ಎಂದು ತನ್ನ ನೆರೆಹೊರೆಯವರು ತನಗೆ ಮಾಹಿತಿ ನೀಡಿದರು ಎಂದು ಸಲೆಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮೃತ ಇಬ್ಬರೂ ಪುರುಷರು ವಿಮಾನದ ಚಕ್ರಗಳನ್ನು ಹಿಡಿದು ಪ್ರಯಾಣ ಮಾಡಿದ್ದರು. ಆದರೆ, ವಿಮಾನ ಹೊರಟ ಕೆಲವೇ ನಿಮಿಷಗಳಲ್ಲಿ ಕೆಳಗೆ ಬಿದ್ದರು. ಅವರು ವಿಮಾನ ನಿಲ್ದಾಣ ದಿಂದ 9 ಕಿಲೋಮೀಟರ್ ದೂರದಲ್ಲಿರುವ ಸಾಲೆಕ್ ಅವರ ಮನೆಯ ಟೆರೇಸ್ ಮೇಲೆ ಅಪ್ಪಳಿಸಿದರು. ಅವರನ್ನು ವೈದ್ಯರಾದ ಸಫೀವುಲ್ಲಾ ಹೊಟಕ್ ಮತ್ತು ಫಿದಾ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಅಲ್ಲದೆ, ಮೃತರು 30ರ ಹರೆಯದವರು ಎಂದು ತಿಳಿದುಬಂದಿದೆ.

See also  ಏಳು ಭಾರಿ ರಾಜ್ಯಸಭಾ ಸದಸ್ಯರಾಗಿದ್ದ ಮಹೇಂದ್ರ ಪ್ರಸಾದ್ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು