ಇಟಲಿ : ಇಟಲಿಯಲ್ಲಿ 22 ವರ್ಷದ ವಿದ್ಯಾರ್ಥಿ ತನ್ನ ಕೋವಿಡ್ ಪ್ರಮಾಣಪತ್ರದ ಬಾರ್ಕೋಡ್ ಅನ್ನು ತನ್ನ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡ ನಂತರ ಅನಿರೀಕ್ಷಿತ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ತಮ್ಮ ಇತ್ತೀಚಿನ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ.
ಆದರೆ ಟ್ಯಾಟೂ ಕಲಾವಿದ ಗೇಬ್ರಿಯೆಲ್ ಪೆಲ್ಲರೋನ್ ಜೊತೆ ಮಾತನಾಡಿದ ನಂತರ ಸಮಯೋಚಿತ ಹಾಗೂ ಪ್ರಾಯೋಗಿಕ ಆಯ್ಕೆ ನಿರ್ಧರಿಸಿದ್ದಾಗಿ ಆ್ಯಂಡ್ರಿಯಾ ಕೊಲೊನೆಟ್ಟಾ ಹೇಳಿದ್ದಾರೆ.
“ಇದು ಖಂಡಿತವಾಗಿಯೂ ಒರಿಜಿನಲ್ ಆಗಿದೆ. ನಾನು ವಿಭಿನ್ನವಾಗಿರಲು ಇಷ್ಟಪಡುತ್ತೇನೆ” ಎಂದು ಕೊರಿಯರ್ ಡೆಲ್ಲಾ ಕ್ಯಾಲಬ್ರಿಯಾ ಪತ್ರಿಕೆಗೆ ರೆಜಿಯೊ ಕ್ಯಾಲಬ್ರಿಯಾದ ಕೊಲೊನೆಟ್ ತಿಳಿಸಿದರು. ಕೊಲೊನೆಟ್ನ ಎಡಗೈನಲ್ಲಿ ತನ್ನ ಅಧಿಕೃತ ಇಟಾಲಿಯನ್ ಗ್ರೀನ್ ಪಾಸ್ನ ಕ್ಯೂಆರ್ ಕೋಡ್ ಟ್ಯಾಟೂ ಹಾಕಿಸಿಕೊಂಡಿದ್ದು, ಕಪ್ಪು ಚೌಕಗಳ ಮ್ಯಾಟ್ರಿಕ್ಸ್ ಹೊಂದಿದೆ.