News Kannada
Monday, October 03 2022

ದೇಶ-ವಿದೇಶ

ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್: ಆರ್ಥಿಕ ದಿಗ್ಬಂಧನದಿಂದ ತಾಲಿಬಾನ್ ಕಂಗಾಲು - 1 min read

Photo Credit :

ಕಾಬೂಲ್: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನಕ್ಕೆ ಒಂದರ ಮೇಲೊಂದರಂತೆ ಸಂಕಷ್ಟಗಗಳು ಎದುರಾಗುತ್ತಿದ್ದು, ಪರಿಸ್ಥಿತಿ ಶೋಚನೀಯವಾಗಿದೆ. ಇದೀಗ ಪ್ರಕ್ಷುಬ್ಧಮಯ ದೇಶಕ್ಕೆ ಹಣಕಾಸು ನೆರವನ್ನು ವಿಶ್ವಸಂಸ್ಥೆ ಸಂಪೂರ್ಣ ಸ್ಥಗಿತಗೊಳಿಸಿದೆ. ಇದರಿಂದಾಗಿ ಉಗ್ರರು ಆರ್ಥಿಕ ದಿಗ್ಬಂಧನದಿಂದ ಕಂಗಲಾಗಿದ್ದಾರೆ.
ಕೆಲ ದಿನಗಳ ಹಿಂದೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೂಡ ಆಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿತ್ತು. ಇನ್ನೊಂದೆಡೆ ಅಮೆರಿಕದ ಬ್ಯಾಂಕುಗಳಲ್ಲಿರುವ ಅಫ್ಘಾನಿಸ್ತಾನ ಹಣವೂ ಜಪ್ತಿಯಾಗಿದ್ದು, ದೇಶದಲ್ಲಿ ಆಹಾರದೊಂದಿಗೆ ಹಣಕ್ಕೂ ಹಾಹಾಕಾರ ಎದ್ದಿದೆ.ಆಫ್ಘಾನಿಸ್ತಾನಕ್ಕೆ 2002ರಿಂದ 5.3 ಶತಕೋಟಿ ಡಾಲರ್ ಹಣ ನೀಡಿದ್ದ ವಿಶ್ವಬ್ಯಾಂಕ್ ಈಗ ದೇಶವು ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಎಲ್ಲ ಬಗೆಯ ಹಣಕಾಸು ನೆರವು ಸ್ಥಗಿತಗೊಳಿಸಿದೆ. ಕಳೆದ ವಾರವಷ್ಟೇ ಆಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಐಎಂಎಫ್ ನಿರ್ಧರಿಸಿತ್ತು. ಇದರಿಂದ 650 ದಶಲಕ್ಷ ಡಾಲರ್ ಹಣಕ್ಕೆ ಕೊಕ್ಕೆ ಬಿದಿದ್ದೆ. ಆ.23ರಂದು ದೇಶಕ್ಕೆ ಬರಬೇಕಿದ್ದ 340 ದಶಲಕ್ಷ ಡಾಲರ್ ಕೂಡ ಕೈ ತಪ್ಪಿ ಹೋಗಿದೆ. ಈ ಎಲ್ಲ ಕಾರಣಗಳಿಂದ ತಾಲಿಬಾನ್‌ಗಳು ಹಣ ಲಭಿಸದೇ ಕಂಗಾಲಾಗಿದ್ದರೆ.

See also  ತಾಲಿಬಾನ್ ಸರ್ಕಾರವು ಅಂತರಾಷ್ಟ್ರೀಯ ಸಮುದಾಯವು ಏನನ್ನು ನೋಡಲು ಬಯಸುತ್ತದೆ ಎಂಬುದನ್ನು ಪ್ರತಿಬಿಂಬಿಸುವುದಿಲ್ಲ: ಯುಎಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು