ಕೆನಡಾ : ಅಫ್ಘಾನಿಸ್ತಾನದಿಂದ ನಾಗರಿಕರ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಕೆನಡಾ ನಿಲ್ಲಿಸಿದೆ. ಆ.31 ರ ಗಡುವಿನ ಅಂತ್ಯದವರೆಗೂ ಆಫ್ಘನ್‌ನಿಂದ ಜನರನ್ನು ಸ್ಥಳಾಂತರ ಮಾಡಲು ಅವಕಾಶ ಇತ್ತು. ಇದೀಗ ಕೆನಡಾ ಕಾರ್ಯಾಚರಣೆ ಅಂತ್ಯಗೊಳಿಸಿದೆ.
ಅಫ್ಘಾನಿಸ್ತಾನದ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಹಿಂದಿನ ದಿನವೇ ಸ್ಥಳಾಂತರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ ಎಂದು ಕೆನಡಾದ ರಕ್ಷಣಾ ಸಚಿವಾಲಯದ ಪ್ರತಿನಿಧಿ ಲೆಫ್ಟಿನೆಂಟ್ ಜನರಲ್ ವೇಯ್ನ್‌ಐರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಹತಾಶೆಯಿಂದ ದೇಶ ತೊರೆಯುತ್ತಿರುವವರಿಗೆ ನಾವು ಸಹಾಯ ಮಾಡಲು ಇಚ್ಛಿಸುತ್ತೇವೆ ಆದರೆ ಅದು ಅಸಾಧ್ಯವಾಗಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಎಂದು ಹೇಳಿದ್ದಾರೆ.