ಕಾಬೂಲ್: ಆಫ್ಘಾನಿಸ್ತಾನವನ್ನು ಆಕ್ರಮಿಸಿದ ತಾಲಿಬಾನ್ ಈಗ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಅದರ ಬೆನ್ನಲ್ಲೇ ತಾಲಿಬಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತಿದೆ ಎಂದು ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ನಿಯಂತ್ರಣಕ್ಕೆ ಪಡೆದು, ತಮ್ಮದೇ ಸಾಮ್ರಾಜ್ಯ ಕಟ್ಟಿ ಆಳ್ವಿಕೆ ನಡೆಸಲು ಮುಂದಾಗಿರುವ ತಾಲಿಬಾನ್ ಇದೀಗ ಭಾರತದೊಂದಿಗೆ ಸಂಬಂಧ ಬೆಳೆಸುವ ಇಚ್ಛೆ ವ್ಯಕ್ತಪಡಿಸಿದೆ. ಈ ಕುರಿತಂತೆ ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿಕೆ ನೀಡಿದ್ದು, ‘ಅಫ್ಘಾನಿಸ್ತಾನದ ತಾಲಿಬಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ ಎಂದು ಹೇಳಿದ್ದಾರೆ.
ಇನ್ನು ಮೂಲಗಳ ಪ್ರಕಾರ ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಈ ಹಿಂದೆ ಭಾರತದ ಡೆಹ್ರಾಡೂನ್ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು ಎನ್ನಲಾಗಿದೆ. ತರಬೇತಿ ಬಳಿಕ ಅಫ್ಘಾನಿಸ್ತಾನಕ್ಕೆ ಹೋಗಿದ್ದ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಅಫ್ಘನ್ ಮಿಲಿಟರಿ ಸೇರಿಕೊಳ್ಳುವ ಬದಲು ತಾಲಿಬಾನ್ ಕಡೆಗೆ ಒಲವು ವ್ಯಕ್ತಪಡಿಸಿ ಆ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ. ಈಗ ಅಫ್ಘಾನಿಸ್ತಾನದ ಬಹುಭಾಗವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ, ಅಫ್ಘಾನಿಸ್ತಾನದ ತಾಲಿಬಾನ್ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ ಎಂದು ಹೇಳಿದ್ದಾನೆ.