News Kannada
Tuesday, January 31 2023

ದೇಶ-ವಿದೇಶ

ಆಫ್ಘಾನಿಸ್ತಾನ: 20 ವರ್ಷಗಳ ಅಮೆರಿಕ ಸೇನಾ ಕಾರ್ಯಾಚರಣೆ ಅಂತ್ಯ

Photo Credit :

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಅಲ್-ಕೈದಾ ಮತ್ತು ತಾಲಿಬಾನ್ ಉಗ್ರರ ವಿರುದ್ಧ 20 ವರ್ಷಗಳ ನಿರಂತರ ಹೋರಾಟ ನಡೆಸಿದ ಅಮೆರಿಕ ಸೇನಾಪಡೆ ತನ್ನ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಅಂತಿಮ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಬುಧವಾರದಿಂದ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸುವುದಾಗಿ ತಾಲಿಬಾನ್ ಘೋಷಿಸಿದೆ.
ಆಫ್ಘಾನಿಸ್ತಾನದಲ್ಲಿರುವ ತನ್ನ 4,500 ಯೋಧರನ್ನು ತೆರವುಗೊಳಿಸುವ ಕಾರ್ಯವನ್ನು ಅಮೆರಿಕದ ಸೋಮವಾರ ಬೆಳಗ್ಗೆಯಿಂದ ಆರಂಭಿಸಿದೆ. ಮಂಗಳವಾರ ಸಂಜೆ ವೇಳೆಗೆ ದೇಶವನ್ನು ಸಂಪೂರ್ಣ ತೊರೆಯಲಾಗುತ್ತದೆ ಎಂದು ಅಮೆರಿಕ ತಿಳಿಸಿದೆ. ಭಾನುವಾರ 1,000 ನಾಗರಿಕರನ್ನು ತೆರವುಗೊಳಿಸಲಾಗಿತ್ತು.ಅಮೆರಿಕದ ನ್ಯೂಯಾರ್ಕ್ ಮತ್ತು ಪೆಂಟಗನ್ ಕಟ್ಟಡಗಳ ಮೇಲೆ 2001ರ ಸೆಪ್ಟೆಂಬರ್ 11ರಂದು ಅಲ್-ಕೈದಾ ಉಗ್ರರು ದಾಳಿ ನಡೆಸಿದ್ದರು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಸೇನಾಪಡೆ ಆಫ್ಘಾನಿಸ್ತಾನದಲ್ಲಿ ಅಲ್-ಕೈದಾ ಮತ್ತು ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ನಂತರ ತಾಲಿಬಾನ್ ಆಡಳಿತವನ್ನು ಪದಚ್ಯುತಗೊಳಿಸಿ ಹೊಸ ಸರ್ಕಾರ ರಚನೆಗೂ ಕೈಜೋಡಿಸಿತ್ತು.
ಅಫ್ಘಾನಿಸ್ತಾನವನ್ನು ಸಂಪೂರ್ಣ ಕೈವಶ ಮಾಡಿಕೊಂಡ ತಾಲಿಬಾನ್‌ಗಳು ಆ.31ರೊಳಗೆ ಸೇನಾಪಡೆ ಸೇರಿದಂತೆ ಎಲ್ಲ ಅಮೆರಿಕನ್ನರು ತೆರವುಗೊಳ್ಳಬೇಕೆಂದು ತಾಕೀತು ಮಾಡಿತ್ತು.

See also  ಶಿವಸೇನೆಗೆ ವಿರೋಧ ಪಕ್ಷದ ಸ್ಥಾನ ಆಯ್ಕೆ: ಸಚಿವ ಪ್ರಹ್ಲಾದ್ ಜೋಷಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು