ಕಾಬೂಲ್ ; ಭಾರತದೊಂದಿಗೆ ರಾಜಕೀಯ , ವ್ಯಾಪಾರ ಸೇರಿದಂತೆ ಇನ್ನಿತರ ಸಂಬಂಧ ಮುಂದುವರಿಯಲಿದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಹೇಳಿದೆ.
ಆಫ್ಘಾನಿಸ್ತಾನದಲ್ಲಿ ಭಾರತ,ಸರಿ ಸುಮಾರು 500ಕ್ಕೂ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅವುಗಳ ಪ್ರಗತಿ ಏನು ಎನ್ನುವ ಅನುಮಾನ ಮೂಡಿತ್ತು.ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ತಾಲಿಬಾನ್ ಹಿರಿಯ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟೆನಕ್ ಜೈ ಅವರು, ಭಾರತದೊಂದಿಗೆ ವ್ಯಾಪಾರ ವಹಿವಾಟು ಸೇರಿದಂತೆ ದ್ವಿಪಕ್ಷೀಯ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ.
ಭಾರತದೊಂದಿಗೆ ಭವಿಷ್ಯದ ದಿನಗಳಲ್ಲಿ ಉತ್ತಮ ಸ್ನೇಹ ಸಂಬಂಧವನ್ನು ಹೊಂದಲು ಆಫ್ಘಾನಿಸ್ಥಾನ ಎದುರುನೋಡುತ್ತಿದೆ ಎನ್ನುವ ವಿಷಯವನ್ನು ಇದೇ ಸಂದರ್ಭದಲ್ಲಿ ಅವರು ಹೊರಹಾಕಿದ್ದಾರೆ.ಭಾರತದೊಂದಿಗೆ ಕೇವಲ ರಾಜಕೀಯವಾಗಿ ಅಷ್ಟೇ ಅಲ್ಲ ಆರ್ಥಿಕವಾಗಿ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಸ್ನೇಹ ಸಂಬಂಧ ಮುಂದುವರಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತದ ಪಾತ್ರ ಮಹತ್ತರವಾದದ್ದು ಹೀಗಾಗಿ ಆ ದೇಶದೊಂದಿಗೆ ಉತ್ತಮ ಸ್ನೇಹ ಭಾಂದವ್ಯ ಮುಂದುವರಿಸುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.ಈ ಸಂಬಂಧ ಸರಿ ಸುಮಾರು 46 ನಿಮಿಷಗಳ ಕಾಲದ ವಿಡಿಯೋ ಬಿಡುಗಡೆ ಮಾಡಿರುವ ತಾಲಿಬಾನ್ ಉಗ್ರರು ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಉತ್ತಮ ಸಂಬಂಧ ಹೊಂದುವ ವಿಷಯವನ್ನು ಹೊರಹಾಕಿದ್ದಾರೆ.ಆಗಸ್ಟ್ 15ರಂದು ಆಶ್ರಫ್ ಗನಿ ನೇತೃತ್ವದ ಆಫ್ಘಾನಿಸ್ತಾನ ಸರ್ಕಾರವನ್ನು ತಾಲಿಬಾನ್ ಉಗ್ರರು ತಮ್ಮ ವಶಕ್ಕೆ ಪಡೆದಿದ್ದರು.
ಭಾರತದೊಂದಿಗೆ ರಾಜಕೀಯ, ವ್ಯಾಪಾರ ಸಂಬಂಧ ಮುಂದುವರಿಕೆ: ತಾಲೀಬಾನ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.