NewsKarnataka
Friday, January 21 2022

ದೇಶ-ವಿದೇಶ

ಅಫ್ಗಾನಿಸ್ತಾನದಲ್ಲಿ ಎರಡು ದಶಕ ಅಮೇರಿಕಾದ ಉಪಸ್ಥಿತಿ ಅಂತ್ಯ: ಬೈಡನ್‌

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಅಮೇರಿಕಾ ಪಡೆಗಳ ಎರಡು ದಶಕಗಳ ಉಪಸ್ಥಿತಿ ಅಂತ್ಯಗೊಂಡಿದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ ಹೇಳಿದರು.

ಅಫ್ಗಾನಿಸ್ತಾನದಿಂದ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಮಂಗಳವಾರ ಅವರು ಮಾತನಾಡಿದರು.

ಆ. 31ರೊಳಗೆ ಭದ್ರತಾಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಈ ತೆರವು ಕಾರ್ಯ ಅತ್ಯಂತ ಅಪಾಯಕಾರಿಯೂ ಆಗಿತ್ತು. ಆದರೆ, ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿರುವುದಕ್ಕೆ ಭದ್ರತಾ ಪಡೆಗಳನ್ನು ಅಭಿನಂದಿಸುತ್ತೇನೆ ಎಂದರು.

ಅಫ್ಗಾನಿಸ್ತಾನದಿಂದ ಯೋಧರನ್ನು ವಾಪಸು ಕರೆಸಿಕೊಳ್ಳಬೇಕು ಎಂಬುದು ಎಲ್ಲ ಸೇನಾಧಿಕಾರಿಗಳ ಸರ್ವಾನುಮತದ ಶಿಫಾರಸು ಆಗಿತ್ತು. ನಮ್ಮ ಯೋಧರ ಪ್ರಾಣ ರಕ್ಷಣೆಗೆ ಇದೇ ಅತ್ಯಂತ ಸೂಕ್ತ ಮಾರ್ಗವಾಗಿತ್ತು ಎಂದ ಅವರು, ಈ ಕುರಿತು ನಾನು ದೇಶವನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದೂ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149
Subscribe to our Brand New YouTube Channel

Subscribe Newsletter

Get latest news karnataka updates on your email.