News Kannada
Wednesday, November 30 2022

ದೇಶ-ವಿದೇಶ

ಕಮಲಾ ಹ್ಯಾರಿಸ್ ಬಾಲ್ಯ, ಸಾಧನೆ ಪರಿಚಯಿಸುವ 300 ಪುಟಗಳ ಪುಸ್ತಕ ಬಿಡುಗಡೆಗೆ ಸಿದ್ಧ - 1 min read

Photo Credit :

ಅಮೆರಿಕ ಉಪಾಧ್ಯಕ್ಷೆ ಸ್ಥಾನದಲ್ಲಿರುವ ಮೊದಲ ಭಾರತೀಯ ಮಹಿಳೆ ಕಮಲಾ ದೇವಿ ಹ್ಯಾರಿಸ್. ಇವರ ಜೀವನ ಕಥೆಯನ್ನು ಹಿರಿಯ ಪತ್ರಕರ್ತ ಚಿದಾನಂದ ರಾಜ್ ಘಟ್ಟ ಅವರು 300 ಪುಟಗಳ ಕಥೆಯ ಮೂಲಕ ಪುಸ್ತಕದ ರೂಪಕ್ಕೆ ಹೊರ ತಂದಿದ್ದಾರೆ.

ಈ ಪುಸ್ತಕದಲ್ಲಿ ಕಮಲಾ ಹ್ಯಾರಿಸ್ ರ ಬಾಲ್ಯ, ವಿದ್ಯಾಭ್ಯಾಸ ಸೇರಿದಂತೆ ಅವರು ಅಮೆರಿಕದ ಉನ್ನತ ಸ್ಥಾನಕ್ಕೇರಲು ಪಟ್ಟ ಶ್ರಮವನ್ನು ವಿವರಿಸಲಾಗಿದೆ.

ಚಿದಾನಂದ ಅವರು ಬರೆದ ‘ಕಮಲಾ ಹ್ಯಾರಿಸ್: ಫೆನೋಮಿನಲ್ ವುಮೆನ್’ ಪುಸ್ತಕ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ಈ ಪುಸ್ತಕದಲ್ಲಿ ಲೇಖಕರು ಕಮಲಾ ಹ್ಯಾರಿಸ್ ಅವರ ಜೀವನದ ಹಲವು ವಿಚಾರಗಳನ್ನು ಬರೆದಿದ್ದಾರೆ.

ಕಮಲಾ ದೇವಿ ಹ್ಯಾರಿಸ್ ಅವರ ಜನನ ಪ್ರಮಾಣ ಪತ್ರದಲ್ಲಿ ಅವರ ಹೆಸರಿನಲ್ಲಿರುವ ದೇವಿ ಪದ ಮುಂಚೆ ಅಯ್ಯರ್ ಎಂದು ಉಲ್ಲೇಖಿಸಲಾಗಿತ್ತು.

ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಸಾಂಪ್ರದಾಯಿಕ ತಮಿಳು ಬ್ರಾಹ್ಮಣ ಕುಟುಂಬದಿಂದ ಬಂದವರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂಡೋಕ್ರಿನಾಲಜಿ ಅಧ್ಯಯನ ಮಾಡಲು ಅವರು 1958 ರಲ್ಲಿ ಅಮೆರಿಕಕ್ಕೆ ತೆರಳಿದರು. ಬಳಿಕ ಅಲ್ಲಿಯೇ ಅವರು ಡೊನಾಲ್ಡ್ ಹ್ಯಾರಿಸ್ ನನ್ನು ಮದುವೆಯಾದರು.

ಹೀಗೆ ಮಹಿಳೆಯರ ರಾಜಕೀಯ ಜೀವನ ಹಾಗೂ ಅಧಿಕಾರದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿಸಲಾಗಿದೆ.

See also  650 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್: ಇಬ್ಬರು ಮಕ್ಕಳು ಸೇರಿ 32 ಜನರ ದಾರುಣ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು