NewsKarnataka
Wednesday, January 26 2022

ದೇಶ-ವಿದೇಶ

ಮ್ಯಾನ್ಮಾರ್-ಭಾರತದ ಗಡಿಯಲ್ಲಿ ಪ್ರದೇಶದಲ್ಲಿ ಪ್ರಬಲ ಭೂಕಂಪನ

ನವದೆಹಲಿ: ಮ್ಯಾನ್ಮಾರ್-ಭಾರತದ ಗಡಿ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.1ರಷ್ಟು ದಾಖಲಾಗಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಶುಕ್ರವಾರ ಸಂಭವಿಸಿದ ಭೂಕಂಪನವು “ಬಹಳ ಪ್ರಬಲವಾಗಿದೆ,” ಎಂದು ಚಿತ್ತಗಾಂಗ್‌ನಿಂದ ಘಟನೆಗೆ ಸಾಕ್ಷಿಯಾದವರೊಬ್ಬರು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಭೂಕಂಪನದ ಕೇಂದ್ರಬಿಂದುದಿಂದ ಪಶ್ಚಿಮಕ್ಕೆ 184 ಕಿಮೀ (115 ಮೈಲುಗಳು) ದೂರದಲ್ಲಿದೆ ಎಂದು ಗೊತ್ತಾಗಿದೆ.

ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ನ (EMSC) ವೆಬ್‌ಸೈಟ್‌ನಲ್ಲಿ ಮತ್ತು Twitter ನಲ್ಲಿ ಬಳಕೆದಾರರು ಮಾಡಿರುವ ಪೋಸ್ಟ್ ಪ್ರಕಾರ, ಬಾಂಗ್ಲಾದೇಶದ ಚಿತ್ತಗಾಂಗ್ ಮತ್ತು ಕೋಲ್ಕತ್ತಾದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕಂಪನದ ತೀವ್ರತೆ 5.8:

ಭೂಕಂಪನದ ಕಂಪನದ ತೀವ್ರತೆಯನ್ನು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ 5.8ಕ್ಕೆ ನಿಗದಿಪಡಿಸಿದೆ. ಈ ಮೊದಲು 6.0 ತೀವ್ರತೆಯನ್ನು ನೀಡಿದ ನಂತರ ಭೂಕಂಪನವು ಮಿಜೋರಾಂನ ಐಜ್ವಾಲ್‌ನಿಂದ ಆಗ್ನೇಯಕ್ಕೆ 126 ಕಿಮೀ ದೂರದಲ್ಲಿದೆ ಎಂದು ಹೇಳಿದೆ.

ಭೂಕಂಪನದ ಕಂಪನದ ತೀವ್ರತೆಯನ್ನು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌ 5.8ಕ್ಕೆ ನಿಗದಿಪಡಿಸಿದೆ. ಈ ಮೊದಲು 6.0 ತೀವ್ರತೆಯನ್ನು ನೀಡಿದ ನಂತರ ಭೂಕಂಪನವು ಮಿಜೋರಾಂನ ಐಜ್ವಾಲ್‌ನಿಂದ ಆಗ್ನೇಯಕ್ಕೆ 126 ಕಿಮೀ ದೂರದಲ್ಲಿದೆ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.