ಕೊರೋನಾ ಸೋಂಕಿನ ರೂಪಾಂತರಿ ವೈರಸ್ ಒಮಿಕ್ರಾನ್ ಗೆ ಅಮೆರಿಕದಲ್ಲಿ ಮೊದಲ ಬಲಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಟೆಕ್ಸಾಸ್ ನ ಆರೋಗ್ಯ ಅಧಿಕಾರಿಗಳು, ಅಮೆರಿಕದಲ್ಲಿ ಒಮಿಕ್ರಾನ್ ಗೆ ಸಂಭವಿಸಿದ ಮೊದಲ ಸಾವು ಇದಾಗಿದೆ. ಮೃತರು 50 ವರ್ಷದವರಾಗಿದ್ದು, ಈವರೆಗೆ ಕೋವಿಡ್ ಲಸಿಕೆ ಪಡೆದಿರಲಿಲ್ಲ ಎಂದು ತಿಳಿಸಿದರು.
ಡಿ.18ರೊಳಗಿನ ಮಾಹಿತಿ ಆಧಾರದ ಮೇಲೆ ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳ ಪೈಕಿ ಶೇ.73ರಷ್ಟು ಒಮಿಕ್ರಾನ್ ಪ್ರಕರಣಗಳೇ ಕಾಣಿಸಿಕೊಂಡಿದೆ ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ. ʼ
ಡಿಸೆಂಬರ್ ನಲ್ಲಿಯೇ ಬ್ರಿಟನ್ ನಲ್ಲಿ ಒಮಿಕ್ರಾನ್ ಗೆ ಮೊದಲ ಸಾವು ಸಂಭವಿಸಿತ್ತು. ಇದಾದ ಬಳಿಕ ಬ್ರಿಟನ್ ನಲ್ಲಿ ಮತ್ತೆ 12ಜನರು ಒಮಿಕ್ರಾನ್ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತರ 104 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.