News Kannada
Wednesday, July 06 2022

ದೇಶ-ವಿದೇಶ

ಲಂಡನ್‌ನ ಈಲಿಂಗ್ ಕೌನ್ಸಿಲ್‌ನ ಮೇಯರ್ ಆಗಿ ಭಾರತೀಯ ಮೂಲದ ಮೊಹಿಂದರ್ ಕೆ.ಮಿಧಾ ಆಯ್ಕೆ - 1 min read

Photo Credit :

 ಲಂಡನ್‌: ಪಶ್ಚಿಮ ಲಂಡನ್‌ನ ಈಲಿಂಗ್ ಕೌನ್ಸಿಲ್‌ನ ಮೇಯರ್ ಆಗಿ ಭಾರತೀಯ ಮೂಲದ ಮೊಹಿಂದರ್ ಕೆ.ಮಿಧಾ ಆಯ್ಕೆಯಾಗಿದ್ದಾರೆ.

ಬ್ರಿಟಿಷ್ ವಿರೋಧ ಪಕ್ಷದ ಲೇಬರ್ ಪಕ್ಷದ ಸದಸ್ಯರಾಗಿದ್ದ ಮಿಧಾ ಅವರು ಈ ಹುದ್ದೆಯನ್ನು ಅಲಂಕರಿಸಿದ ಭಾರತೀಯ ಮೂಲದ ಮೊದಲ ಮಹಿಳೆಯಾಗಿದ್ದಾರೆ. ಮಿಧಾ ಒಂದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಬ್ರಿಟನ್‌ನಲ್ಲಿರುವ ಹಲವು ಭಾರತೀಯ ಸಮುದಾಯಗಳು ಮಿಧಾ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಲೇಬರ್‌ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಜನರ ಜೀವನ ಸುಧಾರಣಾ ಕ್ರಮಗಳು,  ಸಾಂಕ್ರಾಮಿಕ ರೋಗದ ನಿಯಂತ್ರಣ, ಹಿಂಸಾತ್ಮಕ ಅಪರಾಧ ಮತ್ತು ಸಮಾಜವಿರೋಧಿ ನಡವಳಿಕೆಯ ವಿರುದ್ಧ ಹೋರಾಡುವುದು, ಸಾಮಾಜಿಕ ಕಳಕಳಿ, ಪ್ರಾಮಾಣಿಕವಾಗಿ ಕೈಗೆಟಕುವ ಬೆಲೆಯ ಮನೆಗಳನ್ನು ಜನರಿಗೆ ವಿತರಿಸುವುದಾಗಿ ತಿಳಿಸಿದ್ದಾರೆ.

See also  ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣ; ವಕೀಲರ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು