ಚೆನ್ನೈ, ಮಾ.12: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಭಾನುವಾರ ಮುಂಜಾನೆ 4.30ಕ್ಕೆ ಅವರನ್ನು ಬಂಧಿಸಲಾಯಿತು.
ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ದ್ವೀಪ ರಾಷ್ಟ್ರದ ಪರುಥಿತುರೈನಲ್ಲಿರುವ ಶ್ರೀಲಂಕಾ ನೌಕಾ ನೆಲೆಗೆ ಕರೆದೊಯ್ಯಲಾಯಿತು.
ಬಂಧಿತರನ್ನು ಎಲ್.ಅರೋಕಿಯರಾಜ್ (54), ಎ.ಅಶೋಕ್ (28), ಎ.ಕರುಪ್ಪು (22) ಮತ್ತು ಎಸ್.ಶಕ್ತಿ (21) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಪುದುಕೊಟ್ಟೈ ಜಿಲ್ಲೆಯ ಕೊಟ್ಟೈಪಟ್ಟಣಂ ಕರಾವಳಿ ಗ್ರಾಮದವರು.
ಪುದುಕೊಟ್ಟೈನ ಮೀನುಗಾರರು ಶನಿವಾರ ಬೆಳಿಗ್ಗೆ ಕೊಟ್ಟೈಪಟ್ಟಣಂ ಮೀನುಗಾರಿಕಾ ಬಂದರಿನಿಂದ ಪ್ರಯಾಣ ಬೆಳೆಸಿದ್ದರು.
ಬಂಧಿತರು ‘ಅಲೈ ತೀವು’ ಬಳಿ ಸುಮಾರು 30 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಕರಾವಳಿ ಭದ್ರತಾ ಗ್ರೂಪ್ ನ ಮೂಲಗಳು ಐಎಎನ್ಎಸ್ ಗೆ ತಿಳಿಸಿವೆ. ಅವರನ್ನು ಶ್ರೀಲಂಕಾ ನೌಕಾಪಡೆ ತಡೆದಿದೆ. ಶ್ರೀಲಂಕಾದ ಜಲಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ ಆರೋಪ ಅವರ ಮೇಲಿದೆ ಮತ್ತು ತನಿಖೆ ನಡೆಯುತ್ತಿದೆ.
ತಮಿಳುನಾಡಿನ ಹಲವಾರು ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಮತ್ತು ದ್ವೀಪ ರಾಷ್ಟ್ರದ ಸಮುದ್ರ ಕಡಲ್ಗಳ್ಳರು ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.