News Kannada
Wednesday, October 04 2023
ಸಂಪಾದಕರ ಆಯ್ಕೆ

ಶ್ರೀಲಂಕಾದ ರಕ್ಷಕನಾಗಿ ಕೆಲಸ ಮಾಡುತ್ತಿದೆ ಭಾರತ- ರಾನಿಲ್‌ ವಿಕ್ರಮ ಸಿಂಘೆ

Ranil Wickremesinghe: India working as Sri Lanka's saviour
Photo Credit : By Author

ಕೊಲಂಬೊ: ಭಾರತವು ಶ್ರೀಲಂಕಾ ಸೇರಿದಂತೆ ಹಲವು ಪ್ರದೇಶಗಳ ರಕ್ಷಕನಾಗಿ ಕೆಲಸ ಮಾಡುತ್ತಿದೆ ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯವು ಆಯೋಜಿಸಿದ್ದ ಆನ್‌ಲೈನ್ ಸಂದರ್ಶನದಲ್ಲಿ ಭಾಗವಹಿಸಿದ ಅಧ್ಯಕ್ಷ ವಿಕ್ರಮಸಿಂಘೆ, ” ಪ್ರಜಾಪ್ರಭುತ್ವ ಸಂಪ್ರದಾಯ ಮತ್ತು ಮುಕ್ತ ಆರ್ಥಿಕತೆಯನ್ನು ಹೊಂದಿರುವ ಸಣ್ಣ ದೇಶವಾಗಿರುವ ಶ್ರೀಲಂಕಾ ಯಾವಾಗಲೂ ತನ್ನ ರಾಜಕೀಯ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದೆ ಮತ್ತು ಸುದೀರ್ಘ ಸಂಬಂಧಗಳನ್ನು ಹೊಂದಿರುವ ತನ್ನ ಹತ್ತಿರದ ನೆರೆಹೊರೆಯ ಭಾರತವನ್ನು ಈ ಪ್ರದೇಶದ ರಕ್ಷಕನಂತೆ ಪರಿಗಣಿಸಿದೆ ಎಂದರು.

ಹಿಂದೂ ಮಹಾಸಾಗರದಲ್ಲಿ ಅಧಿಕಾರ ಸ್ಥಾಪನೆಗೆ ಪೈಪೋಟಿ ಹೆಚ್ಚುತ್ತಿದೆ. ಆದರೆ ಶ್ರೀಲಂಕಾ ಈ ವಿಷಯದಲ್ಲಿ ರಾಜಕೀಯ ಸ್ಥಿರತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಂಡಿದೆ. ಆದರೆ ಭಾರತವು ಈ ಪ್ರದೇಶದಲ್ಲಿ ರಕ್ಷಕನಂತೆ ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು.

ಭಾರತ, ಚೀನಾ, ಯುಎಸ್, ಜಪಾನ್ ಸೇರಿದಂತೆ ಎಲ್ಲ ದೇಶಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಲು ಬಯುಸುತ್ತದೆ ಎಂದರು. ಭಾರತ ಮತ್ತು ಚೀನಾ, ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷವಾದೆ ಸೌಹಾರ್ದ ವಾತಾವರಣ ಏರ್ಪಡುವುದು ಶ್ರೀಲಂಕಾದ ಇಚ್ಛೆ ಎಂದರು. ಪರಮಾಣು ಶಕ್ತಿಗಳನ್ನು ಹೊಂದಿರುವ ವಿಶ್ವದ ಮೂರು ರಾಷ್ಟ್ರಗಳ ನಡುವೆ ಉದ್ವಿಗ್ನ ಸ್ಥಿತಿ ಉಂಟಾದರರೂ ಚೀನಾ ಅಥವಾ ಭಾರತಕ್ಕೆ ಬೆಂಬಲ ನೀಡುವ ಆಯ್ಕೆ ಮಾಡುವ ಸ್ಥಿತಿ ನಮಗೆ ಎದುರಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಚೀನಾ ಸಮಸ್ಯೆ ದ್ವಿಪಕ್ಷೀಯ ನೆಲೆಯಲ್ಲಿ ಪರಿಹಾರಗೊಳ್ಳಬೇಕೆಂದು ಶ್ರೀಲಂಕಾ ಬಯಸುತ್ತದೆ. ಆದರೆ ಈ ವಿಚಾರದಲ್ಲಿ ರಷ್ಯಾ ಸೇರಿದಂತೆ ಇತರೇ ರಾಷ್ಟ್ರಗಳು ಪರೋಕ್ಷವಾಗಿ ಹಸ್ತಕ್ಷೇಪ ಮಾಡಬಹುದು ಎಂದರು.

ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ನಲ್ಲಿ ಯುಕೆ ಹಸ್ತಕ್ಷೇಪ ಇರಬಾರದು. ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಬಹುದು ಎಂದು ಹಿಂದೆ ನಾನು ಚಿಂತಿತನಾಗಿದ್ದೆ. ಈ ಪ್ರದೇಶದಲ್ಲಿ ನಮ್ಮೊಳಗಿರುವ ಸಮಸ್ಯೆಯನ್ನು ನಾವೇ ಸರಿಪಡಿಸುತ್ತೇವೆ. ಭಾರತ, ಚೀನಾ, ಯುಎಸ್, ಜಪಾನ್ ಒಟ್ಟಾಗಿ ಈ ಸಮಸ್ಯೆ ಪರಿಹಾರವಾಗುವಂತೆ ನೋಡಿಕೊಳ್ಳಬೇಕಿದೆ ಎಂದರು.

See also  ಉಳ್ಳಾಲ: ಬಯೋಮಾರ್ಕರ್ ಮಾಪನ ಆಂಕೋಲಜಿ ಔಷಧ ಅಭಿವೃದ್ಧಿಯ ಅಗತ್ಯ ಅಂಶ- ಡಾ. ಗೋವಿಂದ ಬಾಬು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು